filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.52805555, 0.14458333);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 32; 
ಜಿಲ್ಲೆ

ಆಹಾರ ಮೇಳಕ್ಕೆ ಉತ್ತಮ ಸ್ಪಂದನೆ

*ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸವಿದ ಜನರು

*ನಗುವಿನ ಹೊಳೆ ಹರಿಸಿದ ಮಿಮಿಕ್ರಿ ಗೋಪಿ

ಚಾಮರಾಜನಗರ: ಸರ್ಕಾರಿ ಶಾಲೆಯೊಂದರ ಉನ್ನತೀಕರಣಕ್ಕಾಗಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಮೊದಲ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ವಿರಕ್ತ ಮಠ ಭವನದ ಒಳ ಆವರಣದಲ್ಲಿ ವಸ್ತು ಪ್ರದರ್ಶನ ಮತ್ತು ಹೊರಾಂಗಣದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಒಳಾಂಗಣದಲ್ಲಿ ವಸ್ತು ಪ್ರದರ್ಶನಕ್ಕೆ 24 ಮಳಿಗೆ ಮತ್ತು ಹೊರಾಂಗಣದಲ್ಲಿ ಆಹಾರ ಮೇಳಕ್ಕೆ 17 ಮಳಿಗೆಗಳನ್ನು ತೆರೆಯಲಾಗಿತ್ತು. ಬೆಳಗ್ಗೆಯಿಂದಲೇ ವಸ್ತು ಪ್ರದರ್ಶನಕ್ಕೆ ಆಗಮಿಸಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮೈಸೂರ್ ಸ್ಯಾಂಡಲ್ ಮಳಿಗೆ, ನಮ್ದೂ ರೈತ ಉತ್ಪಾದಕರ ಮಾರುಕಟ್ಟೆ ಹಾಗೂ ಇನ್ನಿತರೆ ಮಳಿಗೆಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಅದಲ್ಲದೇ ವಿವಿಧ ಕಂಪನಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಯಲ್ಲಿ ಮಾಹಿತಿ ಪಡೆದುಕೊಂಡರು. ವಿವಿಧ ಕಂಪನಿಯ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಮಾಹಿತಿಯ ಮಳಿಗೆಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಸಂಜೆಯ ವರೆಗೆ ಸಾಧಾರಣ ಪ್ರಮಾಣದಲ್ಲಿ ಇದ್ದ ಸಾರ್ವಜನಿಕರ ಸಂಖ್ಯೆ ಸಂಜೆಯ ನಂತರ ನಿಧಾನಕ್ಕೆ ಹೆಚ್ಚಾಗುತ್ತಾ ಹೋಯಿತು. ಪರಿಣಾಮವಾಗಿ ನ್ಯಾಯಾಲಯದ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಆಹಾರ ಮೇಳಕ್ಕೆ ಜನರ ಲಗ್ಗೆ:

ಆಹಾರ ಮೇಳಕ್ಕೆ 20 ರೂ, ಪ್ರವೇಶ ದರ ನಿಗದಿ ಮಾಡಿದ್ದರು, ಯಾವುದನ್ನು ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತರಾಗಿ ಲಗ್ಗೆ ಇಟ್ಟರು. ಆಹಾರ ಮೇಳದಲ್ಲಿ ಬೆಂಗಳೂರು ಪುಳಿಯೋಗರೆ, ಮಕಾವ್ ಫುಡ್ ಫಾರೆಸ್ಟ್, ಮುಂಬೈ ಚಾಯ್, ರೋಟಿ ಘರ್, ಕೆಎ-೧೦ ಕಾಫಿ ಹೌಸ್, ಗುರು ದೋಸೆ ಪಾಯಿಂಟ್, ವಾಸವಿ ಚಾಟ್ಸ್, ನಂದೂಸ್ ಫುಡ್ ಹಾಗೂ ಇನ್ನಿತರೆ ಮಳಿಗೆಗಳಿಗೆ ತೆರಳಿದ ಜನರು ವಿವಿಧ ಬಗೆಯ ಆಹಾರ ಪದಾರ್ಥಗಳ ರುಚಿ ಸವಿದರು.ನಂಬಿಕೆ ಸಿರಿಧಾನ್ಯಗಳ ಆಹಾರ ಮಳಿಗೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಸಿರಿಧಾನ್ಯಗಳಿಂದ ತಯಾರಾದ ಬಾದಾಮಿ ಹಾಲು ರುಚಿ ಸವಿದರು. ನಂದಿನಿ ಮಳಿಗೆಗೆ ತೆರಳಿ ವಿವಿಧ ಬಗೆಯ ತಿನಿಸುಗಳನ್ನು ಖರೀದಿ ಮಾಡಿದರು. ಬಳಿಕ ರೋಟರಿ ಸಿಲ್ಕ್ ಸಿಟಿಯ ಮಳಿಗೆಗೆ ತೆರಳಿ ಮಾಹಿತಿ ಪಡೆದುಕೊಂಡರು.

ರೋಟರಿ ಸಿಲ್ಕ್ ಸಿಟಿ ಕಾರ್ಯ ಮಾದರಿ:

ನಗರದ ರೋಟರಿ ಸಿಲ್ಕ್ ಸಿಟಿ ಆಯೋಜನೆ ಮಾಡಿರುವ ಇಂದಿನ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಗೌವರ್ನರ್ ವಿಕ್ರಮ್ ದತ್ತಾ ಹೇಳಿದರು. ತಾಲೂಕಿನ ಮೂಕನಪಾಳ್ಯ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದಕ್ಕೆ ಅಗತ್ಯವಾದ ಹಣವನ್ನು ಕ್ರೂಢೀಕರಿಸಲು ಇದು ವೇದಿಕೆಯಾಗಿದೆ. ಬಹಳ ಉತ್ತಮ ರೀತಿಯಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಡಾ.ನಾಗಾರ್ಜುನ್, ಡಾ.ಶಿವಪ್ರಸಾದ್, ರಿತೇಶ್ ಬಾಳಿಗ, ಮಾನಿಕ್ ಚಂದ್, ವಿಶ್ವಾಸ್, ಮುರುಘೇಂದ್ರ, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯ, ಶಮಿತ್ ಕುಮಾರ್, ವಿಶ್ವಾಸ್ ಹಾಗೂ ಇತರರು ಹಾಜರಿದ್ದರು.

ನಗೆಗಡಲಲ್ಲಿ ತೇಲಿಸಿದ ಮಿಮಿಕ್ರಿ ಗೋಪಿ:

ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿ ಅವರು ನಡೆಸಿಕೊಟ್ಟ ಕಾರ್ಯಕ್ರಮ ನೆರೆದ ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ವಿವಿಧ ಗಣ್ಯರ ದ್ವನಿ ಅನುಕರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.