ಚಿಕ್ಕಮಗಳೂರು ಕೆ.ಎಂ.ರಸ್ತೆ ಸಮೀಪ ಮಲಬಾರ್ ಗೋಲ್ಡ್ ಶಾಖಾ ಕಚೇರಿಯಲ್ಲಿ ಏರ್ಪಡಿಸಿದ್ದ ಹಸಿವು ಮುಕ್ತ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಅವರು ಹಸಿವು ಮುಕ್ತ ಪ್ರಪಂಚದ ಬ್ಯಾನರ್ ಬಿಡುಗಡೆಗೊಳಿಸಿದರು. ಶಂಭುಲಿAಗೇಗೌಡ, ಶ್ರೀನಾಥ್ ಇದ್ದರು. 
ಜಿಲ್ಲೆ

ಆಹಾರ ಪ್ಯಾಕೆಟ್ ವಿತರಿಸುವ ಕಾರ್ಯ ಶ್ಲಾಘನೀಯ

ಚಿಕ್ಕಮಗಳೂರು: ಬಡರೋಗಿಗಳು ಹೆಚ್ಚು ದಾಖಲಾಗುವ ಜಿಲ್ಲಾಸ್ಪತ್ರೆಗಳಿಗೆ ಪ್ರತಿದಿನವು ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುವ ಮೂಲಕ ಮಲಬಾರ್ ಗ್ರೂಪ್ ಸಾಮಾಜಿಕವಾಗಿ ಸ್ಪಂದಿಸುತ್ತಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಮೋಹನ್‌ಕುಮಾರ್ ತಿಳಿಸಿದರು.

ನಗರದ ಕೆ.ಎಂ.ರಸ್ತೆ ಸಮೀಪ ಮಲಬಾರ್ ಗೋಲ್ಡ್ ಶಾಖಾ ಕಚೇರಿಯಲ್ಲಿ ಏರ್ಪಡಿಸಿದ್ದ ಹಸಿವು ಮುಕ್ತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಸಿಎಸ್‌ಆರ್ ಯೋಜನೆಯಿಂದ ೨.೫೦ ಕೋಟಿ ರೂ. ವೆಚ್ಚ ದಲ್ಲಿ ೭೦ ಸಾವಿರ ಆಹಾರ ಪ್ಯಾಕೇಟ್‌ಗಳನ್ನು ನಿರಂತರವಾಗಿ ವಿತರಿಸಲಾಗುತ್ತಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲೂ ೧೫೦ ಆಹಾರ ಪ್ಯಾಕೇಟ್‌ಗಳನ್ನು ರೋಗಿ ಆಪ್ತರಿಗೆ ವಿತರಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ಮಲಬಾರ್ ಗ್ರೂಪ್ ವಾರ್ಷಿಕ ಬಜೆಟ್‌ನ ಶೇ. ೬೦ರಷ್ಟನ್ನು ಆರೋಗ್ಯ, ಶಿಕ್ಷಣ, ರಕ್ಷಣೆ, ಹಸಿವು, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಮೀಸಲಿಟ್ಟು ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಸ್ತುತ ಜಿಲ್ಲಾಸ್ಪತ್ರೆಗೆ ರೋಗಿಗಳ ತುರ್ತು ಆರೈಕೆ ದೃಷ್ಟಿಯಿಂದ ಮಲಬಾರ್ ಸಂಸ್ಥೆ ಸಿಎಸ್‌ಆರ್ ಯೋಜನೆಯಿಂದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಬಡವರ್ಗದವರಿಗೆ ಕೈಹಿಡಿಯುವಂತಾಗಲಿ ಎಂದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಪ್ರತಿದಿನವು ಆಹಾರ ಪ್ಯಾಕೇಟ್‌ಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ. ಆಸ್ತಿ, ಅಂತಸ್ತು ಕೂಡಿಟ್ಟರೆ ಬದುಕಿನಲ್ಲಿ ಏನನ್ನು ಸಾಧಿಸಲಾಗದು. ಆದರೆ ನಾಲ್ಕೆÊದು ಮಂದಿಗೆ ಸಹಾಯಹಸ್ತ ಚಾಚಿದರೆ ಜೀವನ ಸಾರ್ಥಕವಾಗಲಿದೆ ಎಂಬುದು ಮಲಬಾರ್ ಸಂಸ್ಥೆಯ ಕಾರ್ಯವೇ ಉದಾಹರಣೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶಂಭುಲಿAಗೇಗೌಡ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ಜಿಲ್ಲಾ ಶಾಖೆಯ ಮುಖ್ಯಸ್ಥ ಶ್ರೀನಾಥ್, ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.