ಜಿಲ್ಲೆ

ಆಸ್ಪತ್ರೆಗಳ ಬೆನ್ನೆಲುಬು ದಾದಿಯರು

ಕಲಬುರಗಿ: ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಎಂದು ಹೈದರಾಬಾದ್​ ರ‍್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಎಂಎಲ್​ಸಿ ಶಶೀಲ್​ ನಮೋಶಿ ಹೇಳಿದರು

ಬಸವೇಶ್ವರ ಬೋಧನಾ ಹಾಗೂ ಸರ‍್ವಜನಿಕ ಆಸ್ಪತ್ರೆ ದಾದಿಯರ ನೇತೃತ್ವದಲ್ಲಿ ಸೋಮವಾರ ರ‍್ಪಡಿಸಿದ್ದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಮಾತನಾಡಿ, ಚಿಕಿತ್ಸೆಗೆ ಬಂದ ರೋಗಿಗಳನ್ನು ದಾದಿಯರು ನಗು ಮುಖದಿಂದ ಸ್ವಾಗತಿಸಿದಾಗಲೇ ರೋಗಿಗಳ ರ‍್ಧ ಕಾಯಿಲೆ ಗುಣ ಆಗುತ್ತದೆ. ರೋಗಿಗಳೊಂದಿಗೆ ಆತ್ಮೀಯವಾಗಿ ಒಡನಾಡಿ ಮಾನಸಿಕವಾಗಿ ಧರ‍್ಯ ತುಂಬುತ್ತಾರೆ ಎಂದರು.

ಶುಶ್ರೂಷಕರು ತಮ್ಮ ಕೆಲಸ ಬೇಸರ ಮಾಡಿಕೊಳ್ಳದೆ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೃತ್ತಿಯಲ್ಲಿ ಮೇಲೆ ಬರಲು ಸಾಧ್ಯ ಎಂದರು.

ಎಚ್​ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ ಮಾತನಾಡಿ, ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳುವುದು ಮುಖ್ಯ. ದಾದಿಯರ ವೃತ್ತಿಗೆ ವಿಶೇಷ ಸ್ಥಾನಮಾನವಿದೆ. ರೋಗಿಗಳ ಪಾಲಿಗೆ ರ‍್ಸ್​ಗಳು ಸಂಜೀವಿನಿಗಳು. ಪರಿಸರ, ಗಾಳಿ, ನರ‍್ಮಲ್ಯಕ್ಕೆ ಪ್ರಾಮುಖ್ಯ ಕೊಡಬೇಕು ಎಂದು ಫ್ಲಾರೆನ್ಸ್​ ನೈಟಿಂಗೇಲ್​ ಅಂದೇ ತಿಳಿಸಿದ್ದರು. ರ‍್ಸಿಂಗ್​ ಸೇವೆ ಆಗಿರದೆ ವೃತ್ತಿ ಆಗಿದೆ ಎಂದರು.

ಸಂಸ್ಥೆ ಕರ‍್ಯರ‍್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕರ‍್ಯರ‍್ಶಿ ಡಾ.ಕೈಲಾಸ ಪಾಟೀಲ್​, ಬಸವೇಶ್ವರ ಆಸ್ಪತ್ರೆ ಸಂಚಾಲಕ ಡಾ.ಕಿರಣ ದೇಶಮುಖ, ಎಂಆರ್​ಎಂಸಿ ಡೀನ್​ ಡಾ.ಶರಣಗೌಡ ಪಾಟೀಲ್​, ಡಾ.ವಿಜಯಕುಮಾರ ಕಪ್ಪಿಕೇರಿ, ಡಾ.ಆನಂದ ಗಾರಂಪಳ್ಳಿ, ಡಾ.ಎಂ.ಆರ್​.ಪೂಜಾರಿ ಇತರರಿದ್ದರು.

ರ‍್ಸಿಂಗ್​ ಮೇಲ್ವಿಚಾರಕಿ ಎಲ್​.ಸುಮತಿ ಸ್ವಾಗತಿಸಿದರು. ರೇಣುಕಾ ಪ್ರರ‍್ಥಿಸಿದರು. ಅನಿಲ ನಿರೂಪಣೆ ಮಾಡಿದರು. ಲೀನಾ ವಂದಿಸಿದರು.