ಜಿಲ್ಲೆ

ಆಸ್ಪತ್ರೆ ಮೇಲ್ದರ್ಜೆ ಸೌಲಭ್ಯಕ್ಕಾಗಿ ವರದಿ ಸಲ್ಲಿಸಿ

ಸಂಡೂರು: ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳೊಂದಿಗೆ ಚರ್ಚಿಸಿದರು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ಶೌಚಗೃಹ, ಸ್ವಚ್ಛತೆಗೆ ಸಂಬಂಧಿಸಿದಂತೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೂ ಮುನ್ನ ಆಸ್ಪತ್ರೆಯನ್ನು 250 ಬೆಡ್‌ಗಳಿಗೇರಿಸುವುದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಮೇಲುಸ್ತುವಾರಿ ಸಮಿತಿ ಸಲಹೆಗಾರ ಬಾಲಸುಬ್ರಮಣಿಯನ್ ಮಾತನಾಡಿ, ಆಸ್ಪತ್ರೆಯ ಈಗಿನ ಜಾಗ ಸಾಕಾಗೋದಿಲ್ಲ. ವೈದ್ಯರು, ಸಿಬ್ಬಂದಿ ಮತ್ತು ಯಾವ್ಯಾವ ಸೌಲಭ್ಯ ಬೇಕು ಎಂದು ಮಾಹಿತಿ ಪಡೆದರು. ಈ ಕುರಿತು ವರದಿ ಕಳಿಸುವಂತೆ ಸೂಚಿಸಿದರು.

ಜಿ.ಪಂ. ಸಿಇಒ ಎಸ್.ಮಹ್ಮದ್ ಹ್ಯಾರಿಸ್ ಸುಮೇರ್, ಡಿಎಚ್‌ಒ ಡಾ.ರಮೇಶ್ ಬಾಬು, ಟಿಎಚ್‌ಒ ಡಾ.ಭರತ್ ಕುಮಾರ್, ಆರ್‌ಎಫ್‌ಒ ಸೈಯದ್ ದಾದಾ ಖಲಂದರ್ ಇದ್ದರು.

ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬಳಿ ನಿರ್ಮಿಸಲಾಗುತ್ತಿರುವ ಜಿ+2 ಗುಂಪು ಮನೆಗಳು, ಸ್ಮಯೋರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂಡ ಭೇಟಿ ನೀಡಿತ್ತು.