ಜಿಲ್ಲೆ

ಆಸ್ಪತ್ರೆ ಕಾಮಗಾರಿಗೆ ಬೆಲ್ದಾಳೆ ಚಾಲನೆ

ಬೀದರ್: ದಕ್ಷಿಣ ಕ್ಷೇತ್ರದ ಸಿರಕಟನಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, 47 ಲಕ್ಷ ರೂ. ವೆಚ್ಚದಲ್ಲಿ ಸಸುಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ಸಕ್ಕಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು ನಿರಂತರ ಪರಿಶೀಲನೆ ನಡೆಸಬೇಕು. ಸಿರಕಟನಳ್ಳಿ ಗ್ರಾಮಸ್ಥರು ಚಿಕಿತ್ಸೆಗಾಗಿ ಮನ್ನಾಏಖೇಳ್ಳಿ ಅಥವಾ ಬೀದರ್ ಆಸ್ಪತ್ರೆಗಳನ್ನು ಅವಲಂಬಿಸಿದ್ದರು. ಹಲವು ವರ್ಷಗಳ ಬೇಡಿಕೆಗೆ ಇದೀಗ ಕಾಲಕೂಡಿ ಬಂದಿದ್ದು, ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸರಸ್ವತಿ ಗುರುಲಿಂಗಪ್ಪ, ಉಪಾಧ್ಯಕ್ಷ ಪಾಂಡುರಂಗ ಕೋಳಿ, ಪಿಡಿಒ ಶಶಿಕಲಾ, ತಾಲೂಕು ಆರೋಗ್ಯಾಧಿಕಾರಿ ಸಂಗಾರಡ್ಡಿ, ಡಾ.ಪ್ರಮೋದ ಖೇಣಿ, ಡಾ.ಚಂದ್ರಶೇಖರ, ಪ್ರಮುಖರಾದ ಜಗನ್ನಾಥ ಪಾಟೀಲ್, ಶಿವಕುಮಾರ ಸ್ವಾಮಿ, ಮಾಣಿಕಪ್ಪ ಖಾಶೆಂಪುರ, ನಾರಾಯಣರಡ್ಡಿ, ಪೀರಪ್ಪ ಹೂಗಾರ, ವೀರಶೆಟ್ಟಿ ಚಟ್ನಳ್ಳಿ, ರಾಜು ವಡ್ಡಿ, ಮಲ್ಲಿಕಾರ್ಜುನ ಬುಸಾ, ಶರಣಪ್ಪ ಕುಂಬಾರ, ರಾಜಕುಮಾರ ತೂಗಾಂವ್, ಅನೀಲ ಹಿಂದೊಡ್ಡಿ, ಕಾಶೀನಾಥ ಗಂಗೆ, ಜಗನ್ನಾಥ ಕಮಲಪುರ ಇತರರಿದ್ದರು.
ಬಳಿಕ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬೆಲ್ದಾಳೆ ಪರಿಶೀಲನೆ ನಡೆಸಿ ಆಯುಷ್ ಔಷಧ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ನಂತರ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.