ಜಿಲ್ಲೆ

ಆಸ್ತಿಗಾಗಿ ಸಂಬಂಧಿಗಳ ನಡುವೆ ಮಾರಾಮಾರಿ

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ನರಿಗೇಹಳ್ಳಿಯಲ್ಲಿ ಜಮೀನಿಗಾಗಿ ಸಂಬಂಧಿಗಳ ನಡುವೆ ಮಾರಮಾರಿ ನಡೆದು, ತಾಯಿ ಕೆಂಪಮ್ಮ ಹಾಗೂ ಪುತ್ರ ನವೀನ್​ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಬಂಧಿಗಳಾದ ರಾಮಣ್ಣ, ತಂಗ್ಯಮ್ಮ ಮಹೇಶ, ಸಿದ್ದಮ್ಮ ಹಾಗೂ ಮಂಜುನಾಥ್​ ಎಂಬುವವರು ಶನಿವಾರ ಹಲ್ಲೆ ಮಾಡಿದ್ದು, ಬಳಿಕ ಆಸ್ಪತ್ರೆಗೆ ತೆರಳುವಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೆಂಪಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಇಬ್ಬರೂ ತುರುವೇಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.