ಬಾಗಲಕೋಟೆ: ಆಸ್ತಿ ವಿವಾದಕ್ಕೆ ವೃದ್ಧರೊಬ್ಬರನ್ನು ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆ ವ್ಯಕ್ತಿಯ ಕಾಡರಕೊಪ್ಪ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಭವಿಸಿದೆ.
ಬಸನಗೌಡ ಪಾಟೀಲ(೭೫)ಕೊಲೆ ಆಗಿರುವ ವೃದ್ಧ. ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬAಽಸಿದAತೆ ನಿಂಗಪ್ಪ ವಾಲಿಕಾರ, ಲಕ್ಷ÷್ಮಣ ವಾಲಿಕಾರ ಹಾಗೂ ಬಾಳಪ್ಪ ವಾಲಿಕಾರ ಎನ್ನುವ ಮೂವರು ಸಹೋದರನ್ನು ಕೆರೂರ ಪೊಲೀಸರು ಬಂಽಸಿದ್ದಾರೆ.
ಏನಿದು ಆಸ್ತಿ ವಿವಾದ :
ಮೃತ ಬಸನಗೌಡ ಪಾಟೀಲ ಅವರ ಹಿರಿಯರಿಂದ ಬಂಽತ ಆರೋಪಿಗಳ ಹಿರಿಯರು ೧೯೭೭ರಲ್ಲಿ ೧೪ ಎಕರೆ ಜಮೀನು ಖರೀದಿ ಮಾಡಿದ್ದರಂತೆ. ಮಾಲೀಕತ್ವ ಮಾತ್ರ ಖರೀದಿ ಮಾಡಿದವರ ಹೆಸರಿಗೆ ವರ್ಗಾವಣೆ ಆಗಿರಲಿಲ್ಲ. ಆರ್‌ಟಿಸಿಯಲ್ಲಿ ಕೊಲೆಯಾಗಿರುವ ಬಸನಗೌಡ ಅವರ ಸಹೋದರಿ ಹೆಸರು ಇದ್ದು, ಅವರು ವಿದೇಶದಲ್ಲಿ ಇದ್ದು, ಬಹಳ ದಿನಗಳಿಂದ ಇಲ್ಲಿಗೆ ಬಂದಿಲ್ಲ ಎನ್ನಲಾಗುತ್ತಿದೆ.
ಆದರೆ, ಜಮೀನಿನಲ್ಲಿ ಸಾಗುವಳಿಯನ್ನು ಬಂಽತ ಆರೋಪಿಗಳು ಮಾಡುತ್ತ ಬಂದಿದ್ದರು. ಹತ್ತಿರದಲ್ಲಿ ಬಸನಗೌಡ ಪಾಟೀಲ ಅವರಿಗೆ ಸೇರಿದ ಜಮೀನು ಇದೆಯಂತೆ. ತಮ್ಮ ಹಿರಿಯರು ಖರೀದಿ ಮಾಡಿರುವ ಜಮೀನು ಮಾಲೀಕತ್ವವನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಆಗಾಗ ಅವರನ್ನು ಕೇಳುತ್ತಿದ್ದರು. ಸಹೋದರಿ ವಿದೇಶದಿಂದ ಬಂದ ಬಳಿಕ ಮಾಡಿಸಿಕೊಡುವುದಾಗಿ ಹೇಳುತ್ತಲೇ ಬಂದಿದ್ದರೂ, ಅದು ಈ ವರೆಗೂ ಆಗಿರಲಿಲ್ಲ.
ಸೋಮವಾರ ಈ ಮೂವರು ಸಹೋದರರು ಹೊಲದಲ್ಲಿ ಇದ್ದಾಗ ತಮ್ಮ ಪಕ್ಕದ ಜಮೀನಿಗೆ ಬಸನಗೌಡ ಪಾಟೀಲ ಅವರು ಬಂದಿದ್ದಾರೆ. ಅವರನ್ನು ನೋಡಿ, ಜಮೀನು ತಮ್ಮ ಹೆಸರಿಗೆ ಯಾವಾಗ ಮಾಡಿಸಿಕೊಡುತ್ತೀರಿ. ಬರೀ ಹೇಳುವುದೇ ಆಯಿತು ಎಂದು ಹೇಳಿದ್ದಾರೆ. ಆಗ ಇಬ್ಬರ ನಡುವೆ ಸ್ವಲ್ಪ ಮಾತಿನ ಚಕಮಕಿ ಶುರುವಾಗಿದೆ. ಅದು ಕೊನೆಗೆ ವಿಕೋಪಕ್ಕೆ ತಿರುಗಿ ಮೂವರು ಸಹೋದರರು ಸೇರಿ ವೃದ್ಧನಿಗೆ ಕಬ್ಬಿನ ಗಣಕಿ ಹಾಗೂ ಕಲ್ಲುಗಳಿಂದ ಜಜ್ಜಿದ್ದರಿಂದ ಬನನಗೌಡ ಪಾಟೀಲ ಪ್ರಾಣ ಬಿಟ್ಟಿದ್ದಾರೆ.
ಈ ಬಗ್ಗೆ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಽಸಿದ್ದು, ವಿಚಾರಣೆ ಮುಂದುವರೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ಬಂಽತ ಆರೋಪಿಗಳು ಕಾಡರಕೊಪ್ಪ ಗ್ರಾಮದವರು ಇದ್ದು, ಬಸನಗೌಡ ಅವರು ಹೊಸಕೋಟೆ ಗ್ರಾಮದವರು. ಕಾಡರಕೊಪ್ಪ ವ್ಯಾಪ್ತಿಯಲ್ಲಿ ಇವರದ್ದು ಹೊಲ ಇದ್ದಿದ್ದರಿಂದ ಇಂದು ಹೊಲಕ್ಕೆ ಬಂದಾಗಿ ಜಗಳ ಶುರುವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.