ಜಿಲ್ಲೆ

ಆಸ್ತಿ ವಿವಾದ ; ‌ಮನೆಗೆ ನುಗ್ಗಿ ಕಲಬುರಗಿಯಲ್ಲಿ ಮಹಿಳೆ ಬರ್ಬರ ಕೊಲೆ

ಕೆಕೆ ನಗರದಲ್ಲಿ ಹಾಡಹಗಲೆ ಮನೆಗೆ ನುಗ್ಗಿ ದುಷ್ಕರ್ಮಿಗಳ ಕೃತ್ಯ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಮೀನು ವಿವಾದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಹಿಳೆಯನ್ನು ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿದ್ದಲ್ಲದೆ ಇನ್ನೂ ಮೂವರ ಕೊಲೆಗೆ ಯತ್ನಿಸಿದ ಘಟನೆ ಹುಮನಾಬಾದ್ ರಸ್ತೆಯ ರೇವಣಸಿz್ದೆÃಶ್ವರ ಕಾಲನಿ ಸಮೀಪದ ಕೆಕೆ ನಗರದಲ್ಲಿ ಮಂಗಳವಾರ ಹಾಡಹಗಲೆ ನಡೆದಿದೆ.
ವಿಜಯಲಕ್ಷಿö್ಮÃ ಮಲ್ಲಯ್ಯ ಸ್ವಾಮಿ (೪೫) ಕೊಲೆಯಾದವಳು. ಸಹೋದರ ಸಂಬAಧಿಗಳೇ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ದೂರಲಾಗಿದೆ. ಮಾರಕಾಸ್ತçಗಳಿಂದ ದಾಳಿ ನಡೆಸಿದ್ದರಿಂದ ರೇಣುಕಾ, ಗಂಗಾಧರ ಹಾಗೂ ಪಲ್ಲವಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಲಬುರಗಿ ತಾಲೂಕಿನ ಸಿಂದಗಿ(ಬಿ) ಸೀಮಾಂತರದಲ್ಲಿ ವಿಜಯಲಕ್ಷಿö್ಮÃ ಮಾವ ಮಹಾದೇವ ಮಠ ಅವರ ಜಮೀನಿದೆ. ಅದು ಈಕೆ ಪತಿ ಸಹೋದರ ಸಂಬAಧಿಕರ ಕಬ್ಜಾದಲ್ಲಿದೆ. ಅದನ್ನು ಉಳುಮೆಗೆ ನೀಡುವಂತೆ ಕೇಳಿರುವ ವಿಷಯದಲ್ಲಿ ತುಂಬ ದಿನಗಳಿಂದ ಜಗಳ ನಡೆದಿತ್ತು. ನ್ಯಾಯಾಲಯದಲ್ಲೂ ದಾವೆ ದಾಖಲಾಗಿದೆ.
ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕುಪಿತಗೊಂಡ ರೇವಣಸಿದ್ದಯ್ಯ, ಸಿದ್ಧರಾಮಯ್ಯ ಮತ್ತು ಮಡೆಪ್ಪ ಸ್ವಾಮಿ ಸೇರಿ ಮಂಗಳವಾರ ಬೆಳಗ್ಗೆ  ಮೋಟಾರ್ ಸೈಕಲ್‌ಗಳಲ್ಲಿ ಕೆಕೆ ನಗರದಲ್ಲಿರುವ ಮನೆಗೆ ಬಂದು ಮನೆಯೊಳಗೆ ನುಗ್ಗಿ ವಿಜಯಲಕ್ಷಿö್ಮÃ ಮೇಲೆ ಮಾರಕಾಸ್ತçಗಳನ್ನು ಬೀಸಿದ್ದಾರೆ. ತೀವ್ರ ಗಾಯಗೊಂಡ ವಿಜಯಲಕ್ಷಿö್ಮÃ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಮಧ್ಯಪ್ರವೇಶಿಸಿದ ಮಗಳು, ಸಹೋದರಿ ಮತ್ತು ಬಿಡಿಸಲು ಬಂದ ಗಂಗಾಧÀರಗೆ ಗಂಭೀರ ಗಾಯಗಳಾಗಿವೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಚೇತನ್ ಆರ್., ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ಗೀತಾ ಬೇನೂರ, ಇನ್‌ಸ್ಪೆಕ್ಟರ್ ರಮೇಶ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದ್ದು, ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಮೃತಳ ಕುಟುಂಬದವರು ದೂರಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತಲೆಮರೆಸಿಕೊಂಡವರ ಪತ್ತೆಗೆ ಜಾಲ ಬೀಸಲಾಗಿದೆ.