ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಆಸ್ತಿಗಳ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋ ಜನೆ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿ ೮ ನೇ ಸ್ಥಾನದಲ್ಲಿ ಇದೆ ಎಂದು ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯ ದಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ೨೦೨೩-೨೪ರಲ್ಲಿ ಜಿಲ್ಲೆಗೆ ೫೦ ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ನೀಡಲಾಗಿದ್ದು ಜನವರಿ ಅಂತ್ಯದವರೆಗೆ ೪೯.೨೯ ಲಕ್ಷ ಮಾನವದಿನ ಸೃ ಜನೆ ಮಾಡಿ ಶೇ. ೯೮.೫೮ ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯ ದಲ್ಲಿ ಬಾಗಲಕೋಟೆ ಜಿಲ್ಲೆಯು ೮ನೇ ಸ್ಥಾನದಲ್ಲಿ ರುತ್ತದೆ. ಅಲ್ಲದೇ ರೂ.೨೪೨.೬೩ ಕೋಟಿ ಅನುದಾನ ಖರ್ಚು ಭರಿಸಲಾಗಿದೆ ಎಂದರು.
ವಯಕ್ತಿಕ ಕಾಮಗಾರಿ ಅಡಿ ಜಿಲ್ಲೆಯಲ್ಲಿ ೨೦೦೫ ಬದು ನಿರ್ಮಾಣ, ೪೪೩ ಕೃಷಿ ಹೊಂ ಡ, ೧೯೧೭ ದನದ ಕೊಟ್ಟಿಗೆ, ೧೬೬ ಕುರಿ ಶೆಡ್ಡು ಹಾಗೂ ೮೫ ರೈತರ ಹೊಲಗಳಲ್ಲಿ ರೇಷ್ಮೆ ಹಿಪ್ಪು ನೇರಳೆ ಹೊಸನಾಟಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ.ಜಿಲ್ಲೆಯಲ್ಲಿ ೧೪೬ ಶಾಲಾ ಕಂಪೌAಡ್, ೧೨೫ ಶಾಲಾ ಶೌಚಾಲಯ, ೧೭೧,ಶಾಲಾ ಆಟದ ಮೈದಾನ, ೨೬ ಶಾಲಾ ಅಡುಗೆ ಕೋಣೆ, ೨೮ ಸ್ಮಶಾನ ಅಭಿವೃದ್ಧಿ ಹಾಗೂ ೧೦ ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನರೇ ಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟು ಂಬದ ೦೩ ವಗÀðದೊಳಗಿನ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳನ್ನು? ಕೂಸಿನ ಮನೆ? ಎಂಬ ಹೆಸರಿನಲ್ಲಿ ಜಿಲ್ಲೆಗೆ ೧೫೭ ಗುರಿ ನಿಗದಿಪಡಿಸಿದ್ದು, ಅದರಲ್ಲಿ ೧೪೬ ಸ್ಥಳ ಗುರುತಿ ಲಾಗಿದ್ದು ಅದರಲ್ಲಿ ೭೬ ಕೂಸಿನ ಮನೆಗಳನ್ನು ಪ್ರಾರಂಭಿಸ ಲಾಗಿದ್ದು ೮೮೫ ಮಕ್ಕಳು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಬಾಕಿ ಉಳಿದಿರುವ ಕೂಸಿನ ಮನೆಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ತೆರಿಗೆ ಸಂಗ್ರಹ ವೈಜ್ಣಾನಿಕವಾಗಿ ಆಗಬೇಕು ಎಂದು ಪ್ರತಿ ಮನೆ ಮನೆಗೆ ಹೋಗಿ ಸಮೀಕ್ಣೆ ಮಾಡಲಾಗುತ್ತಿದೆ. ಇದು ಮ್ಯಾನವಲ್ ಆಗಿ ಮಾಡಿದ್ದರಿಂದ ಮೂರು ಪಟ್ಟು ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದರು. ಅಪೌಷ್ಠಿಕತೆಯಿಂದ ಮಕ್ಕಳು ಇರಬಾರದು ಎಂದುಕೆಲಸ ಮಾಡಲಾಗುತ್ತಿದೆ. ಅಂಗನವಾಡಿ ಕಟ್ಟಡ ಹಾಗೂ ಸರಿ ಮಾಡಲು ಕ್ರಮವಹಿಸಲಾಗಿದೆ. ಶಿಕ್ಷಣ ಹಾಗೂ ವೈದ್ಯಕೀಯ ಇಲಾಖೆಯ ಕೆಲಸಕ್ಕೆ ಒತ್ತು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಮಕ್ಕಳು ಹೆಚ್ಚು ಅಂಕ ಪಡೆಯಲು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ೧೯೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾತ್ಮಕ ಹಳ್ಳಿ ಎಂದು ಗುರುತಿಸಲಾಗಿದೆ. ಬೋರವೆಲ್ ಮೂಲಕ ನೀರು ಕೊರತೆಯಾದರೆ ಅದನ್ನು ದುರಸ್ತಿ ಮಾಡಿ ನೀರು ಒದಗಿಸುವ ಕೆಲಸ ಮಾಡುತ್ತೇವೆ. ಎಲ್ಲಿಯೂ ಟ್ಯಾಂಕರ ಮೂಲಕ ನೀರು ಕೊಡುವ ವ್ಯವಸ್ಥೆ ಇಲ್ಲ ಎಂದರು.
ಅರಿವು ಇದ್ದರೂ ಬಾಲ್ಯ ವಿವಾಹ ಸಂಖ್ಯೆ ಜಾಸ್ತಿ ಆಗುತ್ತಿದೆ. ಜಿಲ್ಲಾ ಲೀಗಲ್ ತಂಡದಿAದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಾಲ್ಯ ವಿವಾಹ ತಡೆಯಲು ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಕರೆದು ಕಾರ್ಯಾಗಾರ ಮಾಡಲಾಗಿದೆ. ಜಿಲ್ಲೆಯಲ್ಲಿ ೧೧೯ ಬಾಲ್ಯ ವಿವಾಹ ವರದಿ ಬಂದಿದೆ. ೭೭ ಬಾಲ್ಯ ವಿವಾಹ ತಡೆಯಲಾಗಿದೆ. ೧೯ ಕೇಸ್ ಮಾಡಲಾಗಿದೆ. ಕಾನೂನಿನ ಅರಿವು ಇದ್ದಾಗ್ಯೂ ಬಾಲ್ಯ ವಿವಾಹ ಮಾಡಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಸಿಇಓ ಕುರೇರ ಅವರನ್ನು ಸನ್ಮಾನಿಸಲಾಯಿತು. ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಬಂಜನ್ ಇದ್ದರು.