ಜಿಲ್ಲೆ

ಆಸೆ ತೋರಿಸಿ 32 ಲಕ್ಷಕ್ಕೆ ಪಂಗನಾಮ

ಹಾಸನ: ಜಿಲ್ಲೆಯ ಎರಡು ಕಡೆ ನಡೆದಿರುವ ವಂಚನೆ ಪ್ರಕರಣಗಳಲ್ಲಿ ಬರೋಬ್ಬರಿ 32 ಲಕ್ಷ ರೂ.ಗಳಿಗೆ ಪಂಗನಾಮ ಹಾಕಲಾಗಿದೆ. ಸಕಲೇಶಪುರ ತಾಲೂಕಿನ ದೋಣಹಳ್ಳಿ ಗ್ರಾಮದ ಪ್ರವೀಣ ಎಂಬುವರು ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ಆಸೆ ತೋರಿಸಿದ ವಂಚಕನ ಮಾತಿಗೆ ಮರುಳಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ 28,19,379 ಹಣ ಕಳೆದುಕೊಂಡಿದ್ದಾರೆ.
ಜು.14 ರಂದು ಸಂಜೆ ಪ್ರವೀಣ್, ಟೆಲಿಗ್ರಾಂ ಆ್ಯಪ್ ನೋಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಇವರ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿ ಕೆಲಸ ಕೊಡುತ್ತೇವೆಂದು ಹೇಳಿ ನಂಬಿಸಿದ್ದ. ಅದಕ್ಕೂ ಮುನ್ನ ಜು.7 ರಂದು ಅಪರಿಚಿತ ಕಳುಹಿಸಿದ ಓಟಠಿ ಜ್ಞಿಛ್ಟ ಆಚ್ಞ ಅ/ಇ 8813359940, ಐಊಖಇ ಇಈಉ:ಓಓಆಓ0000810 ಖಾತೆಗೆ ಹಾಗೂ ಅಪರಿಚಿತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಗೂಗಲ್ ಪೇ ಮೂಲಕ ಮತ್ತು ಐಖ ಮೂಲಕ ಒಟ್ಟು 12 ಬಾರಿ 28,19,379 ಹಣ ವರ್ಗಾಯಿಸಿದ್ದಾರೆ.
ಆದರೆ ಇದೂವರೆಗೂ ಕೆಲಸ ಕೊಡಿಸದೆ, ಹಣವನ್ನೂ ವಾಪಸ್ ಕೊಡದೇ ಮೋಸ ಮಾಡಿರುವ ಅಪರಿಚಿತನನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸೆ.17 ರಂದು ನಗರದ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಟಾಸ್ಕ್‌ಗಳನ್ನು ನೀಡುತ್ತಾ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಂಭಾಂಶ ಕೊಡಿಸುವುದಾಗಿ ನಂಬಿಸಿ 4,20,212 ಹಣ ವರ್ಗಾಯಿಸಿಕೊಂಡು ಅಪರಿಚಿತ ಮೋಸ ಮಾಡಿರುವ ಘಟನೆ ಅರಸೀಕೆರೆ ತಾಲೂಕು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಚನೆಗೆ ಒಳಗಾಗಿರುವವರು ಸೆ.6 ರಂದು ಇನ್ಸ್ಟಾಗ್ರಾಂ ನಿಂದ ಬಂದ ಲಿಂಕ್ ಮೇಲೆ ಒತ್ತಿ ಟೆಲಿಗ್ರಾಂ ಅಪ್ಲಿಕೇಷನ್‌ಖಜಿಠಿ ಒಛ್ಝಜಿ ಹೆಸರಿನಲ್ಲಿ ಒಂದು ಪೇಜ್‌ಗೆ ಲಿಂಕ್ ಆಗಿದ್ದರು.
ಅದರಲ್ಲಿ ಕೆಲವೊಂದು ಟಾಸ್ಕ್‌ಗಳನ್ನು ನೀಡುತ್ತಾ ಹೆಚ್ಚು ಹಣವನ್ನು ಕೊಡುವುದಾಗಿ ಮೇಸೆಜ್ ಮಾಡುತ್ತಿದ್ದರು. ಅವರು ನೀಡುತ್ತಿದ್ದ ಟಾಸ್ಕ್‌ಗಳನ್ನು ಪೂರ್ಣಗೊಳಿಸುತ್ತಾ ಅಪರಿಚಿತ ನೀಡಿದ ಖಿಐ್ಕಛ್ಛಿ ಘೆಟ:425024700253 ಗೆ ಒಟ್ಟು 4,20,212 ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಹೂಡಿಕೆ ಮಾಡಿದ ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.