ಜಿಲ್ಲೆ

ಆಷಾಢ ಕಡೇ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ

ಯಳಂದೂರು: ಪಟ್ಟಣದ ಗೌರೇಶ್ವರ ಪಾರ್ವತಾಂಬೆ ದೇಗುಲ ಸೇರಿದಂತೆ ತಾಲೂಕಿನ ಅಂಬಳೆ, ಹೊನ್ನೂರು ಗ್ರಾಮದ ಚಾಮುಂಡೇಶ್ವರಿ, ಮದ್ದೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ಐತಿಹಾಸಿಕ ಮಹಾಲಕ್ಷ್ಮೀ ದೇಗುಲದಲ್ಲಿ ಆಷಾಢ ಮಾಸದ ಕಡೇ ಶುಕ್ರವಾರದ ವಿಶೇಷ ಪೂಜೆಯಲ್ಲಿ ಸಲ್ಲಿಸಲಾಯಿತು.
ಪ್ರತಿ ವರ್ಷವೂ ಆಷಾಢ ಶುಕ್ರವಾರ ಪೂಜೆ ನಡೆಸುವ ವಾಡಿಕೆ ಇದೆ. ಇದರ ನಿಮಿತ್ತ ಬೆಳಗಿನಿಂದಲೇ ಪಟ್ಟಣದ ಗೌರೇಶ್ವರ ದೇಗುಲದಲ್ಲಿ ವಿಭೂತಿ ಅಲಂಕಾರ ಹಾಗೂ ಪಾರ್ವತಾಂಬೆಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಸೇರಿದಂತೆ ಹಲವು ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕ ಚಂದ್ರಮೌಳಿ ದೀಕ್ಷಿತ್ ಮಾಹಿತಿ ನೀಡಿದರು.
ದೇವರನ್ನು ಬಗೆಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.