ಜಿಲ್ಲೆ

ಆಷಾಡ ಏಕಾದಶಿ ಉತ್ಸವ 17

ಕಲಬುರಗಿ: ನಗರದ ಸ್ಟೇಷನ್ ಬಜಾರ್‌ನಲ್ಲಿರುವ ೩೦೭ ವರ್ಷಗಳ ಪುರಾತನ ಶ್ರೀ ವಿಠಲ ಮಂದಿರದಲ್ಲಿ ಆಷಾಡ ಏಕಾದಶಿ ನಿಮಿತ್ತ ಜು.17ರಂದು ಬುಧವಾರ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂದಿರ ಟ್ರಸ್ಟ್ ಅಧ್ಯಕ್ಷ ದತ್ತಾತ್ರೇಯ ಪುಕಾಳೆ ತಿಳಿಸಿದರು.
ಬುಧವಾರ ಬೆಳಗ್ಗೆ ೪.೩೦ಕ್ಕೆ ಕಾಕಡಾರತಿ, ೫ಕ್ಕೆ ಪಂಚಾಮೃತ ಅಭಿಷೇಕ, ೬ಕ್ಕೆ ಮೂರ್ತಿ ಅಲಂಕಾರ, ೭.೩೦ಕ್ಕೆ ಮಹಾಮಂಗಳಾರತಿ, ೮ಗಂಟೆಯಿAದ ದರ್ಶನ ಆರಂಭವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ೧೦ರಿಂದ ಶರಣಬಸವೇಶ್ವರ ಸಂಗೀತ ಬಳಗ, ಮಧ್ಯಾಹ್ನ ೧ರಿಂದ ವಿಠಲ ಮಂದಿರ ಮಹಿಳಾ ಭಜನಾ ಮಂಡಳಿ, ೨ರಿಂದ ಲಕ್ಷಿö್ಮÃಕಾಂತ ಹೂಗಾರ ಬಳಗ, ಸಂಜೆ ೪.೩೦ರಿಂದ ರಜಪೂತ ಮಾತಾ ಜಾಗರಣಾ ಸಮಿತಿಯಿಂದ ಭಜನೆ ಕಾರ್ಯಕ್ರಮ ನಡೆಯಲಿವೆ. ಸಂಜೆ ೭.೩೦ಕ್ಕೆ ಸಂಧ್ಯಾ ಆರತಿ ನೆರವೇರಲಿದೆ ಎಂದು ತಿಳಿಸಿದರು.
ಸಂಜೆ ೭.೪೫ರಿಂದ ಚಂದ್ರಕಲಾ ಉಪಾಧ್ಯಾಯರಿಂದ ದಾಸವಾಣಿ ನಡೆಯಲಿದೆ. ಭಕ್ತರಿಗೆ ಪಂಚಾಮೃತ ಅಭಿಷೇಕ, ನೈವೇದ್ಯ ಸೇವೆ ಒದಗಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಹಿತಿಗೆ ವ್ಯವಸ್ಥಾಪಕರನ್ನು (೯೭೪೦೩೧೪೦೧೬) ಸಂಪರ್ಕಿಸಬೇಕು ಎಂದು ತಿಳಿಸಿದರು.
ಅರ್ಚಕ ರೋಷನ್, ಪ್ರಮುಖರಾದ ಧನಂಜಯ ಕೂಡಿ, ದತ್ತಾತ್ರೇಯ, ಪ್ರವೀಣ ಪುಣೆ ಇದ್ದರು.