ಯಾದಗಿರಿ: ನಿರಾಶ್ರಿತರಿಗೆ ಆಶ್ರಯ ನೀಡುವುದು ಮಾನವ ಧರ್ಮ ಅಲ್ಲದೆ ಅದೊಂದು ಪುಣ್ಯದ ಕೆಲಸವಾಗಿದೆ ಎಂದು ಪೌರಾಯುಕ್ತ ರಜನಿಕಾಂತ ಶೃಂಗೇರಿ ಹೇಳಿದರು.
ನಗರಸಭೆ, ಜಿ¯್ಲÁ ಕೌಶಲ ಅಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಗರದ ವಸತಿರಹಿತ ಆಶ್ರಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವ ವಸತಿ ರಹಿತರ ದಿನಾಚರಣೆ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಉಚಿತ ಆಶ್ರಯ ಕೇಂದ್ರವು ಉತ್ತಮವಾಗಿದೆ. ನಿರಾಶ್ರಿತ ಅನುಕೂಲವಾಗಿದೆ ಎಂದು ಹೇಳಿದರು.
ದೇಶದಲ್ಲಿ ಲಕ್ಷಾಂತರ ಜನರು ರಸ್ತೆ, ಪುಟ್‌ಪಾತ್ ಸೇರಿ ಇತರಡೆ ಇರುತ್ತಾರೆ. ರಾತ್ರಿ ಅಲ್ಲಿಯೇ ವಾಸ ಮಾಡುತ್ತಾರೆ. ಇದು ಆಗಬಾರದೆಂಬ ದೃಷ್ಟಿಯಿಂದ ಸರ್ಕಾರ ನಿರಾಶ್ರಿತರ ಆಶ್ರಯ ತಾಣಗಳು ಮಾಡಿ ಅವರಿಗಾಗಿ ಅನೇಕ ಸೌಲಭ್ಯ ಒದಗಿಸಿದೆ. ಇಲ್ಲಿ ಆರಂಭವಾಗಿರುವ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಿರಾಶ್ರಿತರು ಉಳಿದುಕೊಳ್ಳಬೇಕು ಎಂದರು.
ಕೌಶಲ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ್ ಮಾತನಾಡಿ, ನಗರದಲ್ಲಿ ಕಾರ್ಮಿಕರಾಗಿದ್ದು, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉz್ದೆÃಶದಿಂದ ಈ ಆಶ್ರಯ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ಉಪಹಾರ ಒದಗಿಸಲಾಗುವುದು. ಇಲ್ಲಿರುವವರು ಸ್ವಯಂ ಉದ್ಯೋಗಿಗಳಾಗಲು ಸರ್ಕಾರದ ಹಲವು ಯೋಜನೆಗಳಿದ್ದು ಅವುಗಳ ಲಾಭ ಪಡೆದುಕೊಳ್ಳಲು ಇಲಾಖೆ ಸಹಕಾರ ನೀಡುತ್ತದೆ ಎಂದರು.
ನಗರಸಭೆ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ ಪ್ರಾಸ್ತಾವಿಕ ಮಾತನಾಡಿ, ದೇಶ ಹಾಗೂ ರಾಜ್ಯದೆ¯್ಲÉಡೆ ವಸತಿ ರಹಿತರು ರಾತ್ರಿ ವೇಳೆ ಚಳಿ, ಮಳೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ಸರ್ಕಾರ ತಂಗುದಾಣ ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ ನಿರ್ದೇಶಿಸಿದೆ ಎಂದು ತಿಳಿಸಿದರು.
ಕರೊನಾ ವೇಳೆ ಹಲವು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸರ್ಕಾರದ ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿz್ದÉÃವೆ. ಜಿ¯್ಲÉಯಲ್ಲಿ ಯಾದಗಿರಿ, ಶಹಾಪುರ ಮತ್ತು ಸುರಪುರ ನಗರದಲ್ಲಿ ಆಶ್ರಯ ಕೇಂದ್ರವಿದ್ದು ೨೦೧೯ರಿಂದ ಈವರೆಗೆ ಅನೇಕ ಜನರು ಇದರ ಲಾಭ ಪಡೆದಿz್ದÁರೆ ಎಂದರು.
ಭಾರತಾAಬೆ ಶಿP್ಷÀಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಭೀಮಾಶಂಕರ ದೊಡ್ಮನಿ ಮಾತನಾಡಿದರು. ವಸತಿ ರಹಿತರ ಆಶ್ರಯದ ಸೌಲಭ್ಯ ಕುರಿತು ಕರಪತ್ರ ಬಿಡುಗಡೆ, ಆರೋಗ್ಯ ತಪಾಸಣೆ, ಯೋಗ ಮತ್ತು ಧ್ಯಾನ ಶಿಬಿರ, ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಯಿತು.