ಜಿಲ್ಲೆ

ಆಶಾ ಕಾರ್ಯಕರ್ತೆ ಆಭರಣ ಕಳವು

ಕಲಬುರಗಿ: ೨೦೨೪ರ ಸೆಪ್ಟೆಂಬರ್​ನಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಶಾ ಕರ‍್ಯರ‍್ತೆಯ ಬಂಗಾರದ ಆಭರಣ ಕಳುವಾದ ಕುರಿತು ೧೦ ತಿಂಗಳ ನಂತರ ನಗರದ ಬ್ರಹ್ಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ೨೦೨೪ ಸೆಪ್ಟೆಂಬರ್​ನ ೧೩ ಮತ್ತು ೧೪ರಂದು ರಾಜ್ಯ ಮಟ್ಟದ ಆಶಾ ಕರ‍್ಯರ‍್ತೆಯರ ಸಮ್ಮೇಳನ ಆಯೋಜಿಸಲಾಗಿತ್ತು. ಆಶಾ ಕರ‍್ಯರ‍್ತೆಯರು ರಾತ್ರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ದಾವಣಗೇರೆ ಜಿಲ್ಲಾ ಅಧ್ಯ ಲಲೀತಮ್ಮಾ ಅವರ ೧.೩೫ ಲಕ್ಷ ರೂ. ಮೌಲ್ಯದ ೨೩ ಗ್ರಾಂ.ಚಿನ್ನದ ಸರ ಕಳವಾಗಿತ್ತು. ಅಂದಿನ ಟನೆ ಕುರಿತು ಆಶಾ ಕರ‍್ಯರ‍್ತೆಯರ ಸಂಟನೆಯ ಜಿಲ್ಲಾ ಕರ‍್ಯರ‍್ಶಿ ಶರಣಬಸಪ್ಪ ರ‍್ಮಾ ಇದೀಗ ದೂರು ದಾಖಲಿಸಿದ್ದಾರೆ.