ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಆವರ್ತಿ ಸೋಮಶೇಖರ್, ಮೋಹನ್ ರಾಜ್ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿ ಆವರಣದಲ್ಲಿ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆವರ್ತಿ ಸೋಮಶೇಖರ್ ಮತ್ತು ಅಲ್ಲಾಹುದ್ದಿನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಸ್.ಮೋಹನ್‌ರಾಜ್ ಮತ್ತು ತಾರಾ ನಾಮಪತ್ರ ಸಲ್ಲಿಸಿದ್ದರು. 12 ಜನ ಸದಸ್ಯರಿರುವ ಸಂಘದಲ್ಲಿ 7 ಮತ ಪಡೆದು ಅಧ್ಯಕ್ಷರಾಗಿ ಆವರ್ತಿ ಸೋಮಶೇಖರ್, ಉಪಾಧ್ಯಕ್ಷರಾಗಿ ಮೋಹನ್ ರಾಜ್ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಹಿತೇಂದ್ರ ಕಾರ್ಯನಿರ್ವಹಿಸಿದರು.
ಅಶೋಕ್ ಕುಮಾರ್, ಎಂ.ಎ.ಚಂದ್ರೇಗೌಡ, ಎ.ಎಸ್.ಮಂಜು, ವೆಂಕಟೇಶ್, ಕೆ.ಎಚ್.ಸುಮಿತ್ರಾ, ಕೆ.ಎಸ್.ಕಲ್ಯಾಣಪ್ಪ, ಎ.ಎಲ್. ಶಿವಪ್ಪ. ಬಿ.ಆರ್.ಸುಬ್ರಹ್ಮಣ್ಯ, ಜೆಡಿಎಸ್ ಮುಖಂಡ ಅಣ್ಣಯ್ಯ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಐಲಾಪುರ ರಾಮು, ಎ.ಎನ್.ಚಂದ್ರಶೇಖರ್, ತಿರುಮಲಾಪುರದ ರಾಜೇಗೌಡ, ಸಂಘದ ಕಾರ್ಯನಿರ್ವಣಾಧಿಕಾರಿ ಕೆ.ಎಸ್.ಲೀಲಾವತಿ, ಪಿ.ಎನ್.ಸೋಮಶೇಖರ, ಕುಮಾರಪ್ಪ, ಗಾಯತ್ರಿ ದೇವಿ, ನಿತಿನ್, ಶಾಮ್‌ಸುಂದರ್, ಜಗದೀಶ್, ಮುಖಂಡರಾದ ಗಿರೀಶ್, ರಾಮಚಂದ್ರ, ಚೆಲುವರಾಜು, ಹರೀಶ. ರಾಮೇಗೌಡ, ನಾರಾಯಣ, ರಂಗನಾಥ್ ಪ್ರತಾಪ್, ವೆಂಕಟೇಶ್, ಶಿವಣ್ಣ, ಶಿವಕುಮಾರ್. ದಿವಾಕರ್, ಅಣ್ಣಯ್ಯ, ಸಾಬೀರ್ ಸಾಬ್, ಸಯ್ಯದ್ ಸಲೀಮ್ ಹಾಜರಿದ್ದರು.