ಜಿಲ್ಲೆ

ಆಳ್ವಾಸ್ ಸಾಂಸ್ಕೃತಿಕ ವೈಭವ ಫೆ.೧ರಂದು

ಕಲಬುರಗಿ: ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ೩೦೦ ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಫೆ.೧ರಂದು ಸಂಜೆ ೬ಕ್ಕೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ ಎಂದು ಕಲಬುರಗಿ ನುಡಿಸಿರಿ ಘಟಕದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹೇಳಿದರು.

ನಗರದಲ್ಲಿ ಐದು ವರ್ಷದ ನಂತರ ೧೮೦ ವಿದ್ಯಾರ್ಥಿನಿಯರು, ೧೨೦ ವಿದ್ಯಾರ್ಥಿಗಳು ಒಳಗೊಂಡ ಕಲಾವಿದರ ತಂಡ ಸುದೀರ್ಘ ಮೂರು ಗಂಟೆ ಮನಮೋಹಕ ನೃತ್ಯ, ಮಲ್ಲಕಂಬ, ರೋಪವೇ ಪ್ರದರ್ಶನ ನೀಡಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನ ಮಠದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ, ಮದರ್ ತೆರೇಸಾ ಆಸ್ಪತ್ರೆ ನಿರ್ದೇಶಕ ಫಾ.ವಿನ್ಸೆಂಟ್ ಪಿರೇರಾ, ಬಂತೇ ಸಂಘಾನAದ, ನಶೀನ್ ಸಜ್ಜಾದ್ ಸೈಯದ್ ಹುಸೇನಿ ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿP್ಷÀಣ ಸಂಸ್ಥೆ ಅಧ್ಯಕ್ಷ ಮೋಹನ ಆಳ್ವಾ, ನುಡಿಸಿರಿಯ ಗೌರವಾಧ್ಯಕ್ಷರಾದ ಡಾ.ಪಿ.ಎಸ್.ಶಂಕರ್ ಅಧ್ಯP್ಷÀತೆ ವಹಿಸಲಿz್ದÁರೆ. ಡಿಸಿ ಫೌಜಿಯಾ ತರನ್ನುಮ್, ಕಮೀಷನರ್ ಡಾ.ಶರಣಪ್ಪ ಎಸ್.ಡಿ., ಜಿಮ್ಸ್ ಮುಖ್ಯ ಆಡಳಿತಾಧಿಕಾರಿ ಪ್ರಮೀಳಾ ಎಂ.ಕೆ, ಡಾ.ವೀನಾ ಸಿದ್ದಾರೆಡ್ಡಿ, ಬಾಲರಾಜ ಗುತ್ತೇದಾರ್, ಡಾ.ಗೌತಮ್ ಜಹಾಗೀರದಾರ್, ರಾಘವೇಂದ್ರ ಮೈಲಾಪುರ, ಡಾ.ಫಾರೂಕ್ ಮಣ್ಣೂರ್, ಪ್ರವೀಣ ಜತ್ತನ್ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದರೂ ಸಹ ಲೆಕ್ಕಾಚಾರದ ದೃಷ್ಟಿಯಿಂದ ಪಾಸ್ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೋಟೆಲ್ ಆಮಂತ್ರಣ, ಸೆಂಟರ್ ಕಾಮತ್, ಡಿಸಿ ಕಚೇರಿಯ ಹೊಟೇಲ್ ಆಮಂತ್ರಣ, ಸೂಪರ್ ಮಾರ್ಕೆಟ್ ಕಾಮತ್ ಹೋಟೆಲ್, ಹೋಟೆಲ್ ಕಮಲ್, ರಾಮ ಮಂದಿರ ಬಳಿಯ ಹೋಟೆಲï ಆಮಂತ್ರಣ ನೆಕ್ಟ್ö್ಸನಲ್ಲಿ ಪಾಸ್ ವಿತರಣೆ ಜ.೨೯ರಿಂದ ಆರಂಭವಾಗಲಿದೆ ಎಂದು ಸದಾನಂದ ಪೆರ್ಲಾ ಹೇಳಿದರು.

ಉಪಾಧ್ಯಕ್ಷ ರವಿ ಮುಕ್ಕಾ, ಶರಣು ಪಪ್ಪಾ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹ ಮೆಂಡನ್, ಎಸ್.ಎಸ್.ಹಿರೇಮಠ ಇತರರಿದ್ದರು.