ಆಳಂದ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಸಿವಿಲ್ ಮತ್ತು ಕ್ರಿಮಿನಲ್ ಸೇರಿ ಒಟ್ಟು 2364 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ. ಅರುಟಗಿ ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿ, ಸಿವಿಲ್ ಮತ್ತು ಕ್ರಿಮಿನಲ್ ಸೇರಿ ಒಟ್ಟು 2888 ಪ್ರಕರಣಗಳಿದ್ದವು. ಕಕ್ಷಿದಾರರೊಂದಿಗೆ ಸಮರ್ಪಕ ಮಾತುಕತೆ ನಡೆಸಿ, ಸಂಧಾನ ಏರ್ಪಡಿಸಿ ಕೋರ್ಟ್ನಲ್ಲಿ ಉಳಿದಿದ್ದ 2364 ಕೇಸ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪುರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ನೇಹಾ ಪಾಟೀಲ್ ಅವರು ಸಮರ್ಪಕ ವಿಚಾರಣೆ ನಡೆಸಿದರು.
ಸಹಾಯಕ ಅಭಿಯೋಜಕಿ ಜ್ಯೋತಿ ವಿ.ಬಂದಿ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಕಮಲ್ ರಾಠೋಡ್, ಕಾರ್ಯದರ್ಶಿ ಬಿ.ಟಿ.ಸಿಂಧು, ನ್ಯಾಯವಾದಿಗಳಾದ ಎಸ್.ಎ.ಪಾಟೀಲ್, ಎ.ಡಬ್ಲು.ಅನ್ಸಾರಿ, ಎ.ಸಿ.ತೋಳೆ, ದೇವಾನಂದ ತಾಟಿ, ಎಸ್.ಎಸ್. ಚಿಂಚೂರೆ, ಎಸ್.ಡಿ.ಬೋಸಗೆ, ಮಹಾದೇವ ಹತ್ತಿ, ಜ್ಯೋತಿ ಹಂಚಾಟೆ, ಬಿ.ಜಿ.ಬೀಳಗಿ, ದೀಪಾರಾಣಿ ಕುಲಕರ್ಣಿ, ಪುರುಷೋತ್ತಮ ಆಪ್ಟೆ, ಮಲ್ಲಿಕಾರ್ಜುನ ಗೋವಿನ ಇತರರಿದ್ದರು.