ಜಿಲ್ಲೆ

ಆಳಂದ ಟೋಲ್‌ಗೇಟ್‌ನಲ್ಲಿ ಕಿರಿಕಿರಿ ರೊಚ್ಚಿಗೆದ್ದ ಪ್ರಯಾಣಿಕರ ಪ್ರತಿಭಟನೆ

ಬಾಬುರಾವ ಯಡ್ರಾಮಿ


ಕಲಬುರಗಿ : ವಾಗ್ಧರಿ-ರಿಬ್ಬನಪಲ್ಲಿ ಹೆದ್ದಾರಿಯಲ್ಲಿರುವ ಆಳಂದ ತಾಲೂಕಿನ ಕಡಗಂಚಿ ಬಳಿಯಲ್ಲಿರುವ ಟೋಲ್‌ನಾಕಾದಲ್ಲಿ ಸರ್ವಿಸ್ ರಸ್ತೆಯಲ್ಲಿ ಸ್ಥಳೀಯರ ವಾಹನಗಳನ್ನು ಉಚಿತವಾಗಿ ಓಡಾಡಲು ಬಿಡದೆ ಹಣ ಸುಲಿಗೆ ಮಾಡುತ್ತಿದ್ದನ್ನು ನಿಲ್ಲಿಸುವಂತೆ ಮತ್ತು ಟೋಲ್ ಗೇಟ್‌ನವರ ವರ್ತನೆಯನ್ನು ಖಂಡಿಸಿ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಮಿಂಚಿನ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೇಂದ್ರೀಯ ವಿಶ್ವವಿದ್ಯಾಲಯದ ಪಕ್ಕದÀ ಟೋಲ್‌ಗೇಟï‌ನಲ್ಲಿ ಪ್ರತಿ ದಿನ ಎರಡೂ ಕಡೆಯ ಸರ್ವಿಸ್ ಮಾರ್ಗದಿಂದ ಸ್ಥಳೀಯರ ವಾಹನಗಳು ಹೋಗಿ ಬರುತ್ತಿದ್ದವು. ಆದರೆ, ಬುಧವಾರದಿಂದ ಎಲ್ಲ ಟೋಲï ಗೇಟ್‌ಗಳಲ್ಲಿಯೂ ಎಲ್ಲ ವಾಹನದವರಿಂದ ಹಣ ವಸೂಲಿ ಮಾಡಲು ಶುರು ಮಾಡಿದ್ದಾರೆ. ಸ್ಥಳೀಯರು ಹಣ ಕೊಡುವುದರ ಜತೆಗೆೆ ಫಾಸ್ಟ್ ಟ್ಯಾಗ್ ಇಲ್ಲದವರು ಡಬಲï ಹಣ ತೆತ್ತುವಂತಾಗಿದೆ.
ಕಲಬುರಗಿಯಿAದ ಆಳಂದನಲ್ಲಿ ಹೋರಾಟ ನಡೆಸಲು ತೆರಳಿದ್ದ ಹೋರಾಟಗಾರ್ತಿ ನೀಲಾ ಕೆ. ಇತರರು ಆಳಂದನಲ್ಲಿ ಹೋರಾಟ ಮುಗಿಸಿಕೊಂಡು ಬರುವಾಗ ಎರಡೂ ಸರ್ವಿಸ್ ಮಾರ್ಗಗಳಲ್ಲಿ ಗಾಡಿ ಮತ್ತು ಬ್ಯಾರಿಕೇಡ್ ಅಡ್ಡ ಇಟ್ಟು ಟಿಕೆಟï ಪಡೆಯುವ ಮಾರ್ಗದತ್ತ ಕೈ ತೋರಿಸಿದರು. ಇದರಿಂದಾಗಿ ಕುಪಿತಗೊಂಡ ಮಹಿಳಾ ಹೋರಾಟಗಾರ್ತಿಯರು ಆಳಂದ-ಕಲಬುರಗಿ ನಡುವಿನ ಟೋಲ್ ಗೇಟ್‌ದಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಪ್ರತಿಭಟನೆಗಿಳಿದರು.
ಟೋಲ್ ವಸೂಲಿ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವುದಕ್ಕೆ ಕಂಗೆಟ್ಟಿದ್ದ ಇನ್ನಷ್ಟು ವಾಹನಗಳಲ್ಲಿನ ಜನರು ನೀಲಾ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸೇರಿಕೊಂಡರು. ಇದರಿಂದಾಗಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿ ಟೋಲ್ ನಾಕಾದವರಿಗೆ ಬಿಸಿ ಮುಟ್ಟಿಸಲಾಯಿತು.
ಹೋರಾಟಕ್ಕೆ ಮಣಿದ ಟೋಲ್‌ದವರು ಸರ್ವಿಸ್ ರಸ್ತೆಯಲ್ಲಿ ಸ್ಥಳೀಯರ ವಾಹನಗಳನ್ನು ಉಚಿತವಾಗಿ ಪ್ರಯಾಣಿಸಲು ಬಿಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ನೀಲಾ ಕೆ. ಇತರರ ಹೋರಾಟದಿಂದ ಸ್ಥಳೀಯರು ಟೋಲ್ ಸುಲಿಗೆಗೊಳಗಾಗವುದು ತಪ್ಪಿತು.