ಬೆಳಗಾವಿ: ‘ಕಲಿಯುಗದ ಕಲ್ಪವೃಕ್ಷ ರಾಘವೇಂದ್ರರಾಯರು’ ಎಂಬ ಪುಸ್ತಕ ಆಳವಾದ ಅಧ್ಯಯನದಿಂದ ಕೂಡಿದೆ. ‘ಭಜನಾ ಮಂಜರಿ’ ಗ್ರಂಥವು ಸರಳ ಹಾಗೂ ಸುಂದರವಾಗಿ ಮೂಡಿಬಂದಿದೆ ಎಂದು ಡಾ.ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಯರ 350ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಬೆಳಗಾವಿಯ ಡಾ. ಚಿಂತಾಮಣಿ ಜೋರಾಪುರ ವಿರಚಿತ ‘ಕಲಿಯುಗದ ಕಲ್ಪವೃಕ್ಷ ರಾಘವೇಂದ್ರ ರಾಯರು’ ಹಾಗೂ ‘ಭಜನಾ ಮಂಜರಿ’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಹಲವು ವರ್ಷಗಳಿಂದ ಅನೇಕ ಧಾರ್ಮಿಕ ಪುಸ್ತಕಗಳನ್ನು ಜೋರಾಪುರ ಅವರು ಶ್ರೀಮಠದಲ್ಲಿ ಬಿಡುಗಡೆಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಂಡಿತ ಗಿರಿಯಾಚಾರ್ಯ, ನಿವೃತ್ತ ನ್ಯಾಯಮೂರ್ತಿ ಶ್ರೀಧರರಾವ್, ಸಂಸ್ಕೃತ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್. ಪಂಚಮುಖಿ, ಗೌತಮಾಚಾರ್ಯರು ಹಾಗೂ ಡಾ. ಎಸ್. ವಾದಿರಾಜಾಚಾರ್ಯ ಇದ್ದರು.