ಜಿಲ್ಲೆ

‘ಆಲ್‌ರೈಟ್ ಮಂತ್ರ ಮಾಂಗಲ್ಯ’ ನಾಟಕ

ಮೈಸೂರು: ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡದಿಂದ ಜು.30ರಂದು ‘ಆಲ್‌ರೈಟ್ ಮಂತ್ರ ಮಾಂಗಲ್ಯ’ ನಾಟಕ ಪ್ರದರ್ಶನವಾಗಲಿದೆ.
ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಅಂದು ಸಂಜೆ 7ಕ್ಕೆ ನಾಟಕ ಪ್ರದರ್ಶನವಾಗಲಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿ ಪತ್ರಕರ್ತ ಗಣೇಶ ಅಮೀನಗಡ ಅವರು ಈ ನಾಟಕ ರಚಿಸಿದ್ದಾರೆ. ಮೈಮ್ ರಮೇಶ್ ನಾಟಕದ ವಿನ್ಯಾಸ ಹಾಗೂ ನಿರ್ದೇಶನ ಮಾಡಲಿದ್ದು, ಎನ್‌ಎಸ್‌ಡಿ ಪದವೀಧರ ಜಗದೀಶ್ ಆರ್.ಜಾಣಿ ಸಂಗೀತ ನೀಡಲಿದ್ದಾರೆ. ನಾಟಕಕ್ಕೆ ಮುನ್ನ ಕೃತಿ ಪ್ರೇಕ್ಷಕರಿಂದ ಬಿಡುಗಡೆಯಾಗಲಿದೆ ಎಂದು ಜಿಪಿಐಇಆರ್ ತಂಡದ ಸಂಚಾಲಕ ಎಂ.ಪಿ.ಹರಿದತ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.