ಜಿಲ್ಲೆ

ಆರ್‌ಸಿಬಿ ತಂಡ ಗೆಲುವಿಗಾಗಿ ವಿಶೇಷ ಪೂಜೆ

ಚಿತ್ರದುರ್ಗ: ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಪ್ರಾರ್ಥಿಸಿ ಮಂಗಳವಾರ ವಿವಿಧ ಸಂಘಟನೆಗಳ ಸದಸ್ಯರು ನಗರ ಪೊಲೀಸ್ ಠಾಣೆ ಆವರಣದ ಶ್ರೀ ಕಣಿವೆಮಾರಮ್ಮ ದೇವಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ಪ್ರವೇಶಿಸಿದೆ. ಈ ಬಾರಿ ಕಪ್ ನಮ್ಮದಾಗುವ ವಿಶ್ವಾಸವಿದೆ ಎಂದು ಪೂಜೆ ಸಲ್ಲಿಸಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಹೇಳಿದರು.

ವೀಣಾ ಗೌರಣ್ಣ, ಗೋಪಿನಾಥ್, ಜಗದೀಶ್, ಅವಿನಾಶ್, ಹರೀಶ್‌ ಕುಮಾರ್, ಮುಜಾಯಿದ್, ನಾಗೇಶ್, ಶಶಿಧರ್, ಅಖಿಲೇಶ್, ವಿಜಯ ಬಾಬು, ರತ್ನಮ್ಮ ಇತರರಿದ್ದರು.

ಕಾರ್ಮಿಕ ಸಂಘದಿಂದ ಪ್ರಾರ್ಥನೆ: ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಕಾರ್ಯಕರ್ತರು ಮಂಗಳವಾರ ಶ್ರೀ ಕಣಿವೆಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರ್‌ಸಿಬಿ ಗೆಲುವಿಗೆ ಪ್ರಾರ್ಥಿಸಿದರು.

ಲೇಖಕ ಎಚ್.ಆನಂದ್‌ಕುಮಾರ್, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಮಲ್ಲಿಕಾರ್ಜುನ ಪಾರ್ಥ ಮಾತನಾಡಿ, ಕಪ್ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಇದ್ದರು.