ಜಿಲ್ಲೆ

ಆರ್ಮಿ ಅಧಿಕಾರಿ ಎಂದು ನಂಬಿಸಿ ೨೦ ಲಕ್ಷ ರೂ. ಮಕ್ಮಲ್ ಟೋಪಿ ಹಾಕಿದ ಭೂಪರು


ವಿಜಯವಾಣಿ ಸುದ್ದಿಜಾಲ ಕಲಬುರಗಿ
 ಆರ್ಮಿ ಅಧಿಕಾರಿಗಳು ಎಂದು ನಂಬಿಸಿ ೨೦ ಲಕ್ಷ ರೂ. ಹಂತ ಹಂತವಾಗಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು, ಈಗ ಹಣ ಕೊಡದೆ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ನಗರದ ಐವಾನ್-ಇ-ಶಾಹಿ ಪ್ರದೇಶದ ಅಬ್ದುಲ್ ಖದೀರ್ ಎಂಬುವರೇ ಮೋಸಕ್ಕೊಳಗಾದವರು. ಸೌದಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡಿ ನಿವೃತ್ತಗೊಂಡಿದ್ದರು.
ಅಬ್ದುಲ್‌ಖದೀರ ಪುತ್ರ  ಅಬ್ದುಲ್ ಮಲ್ಲಿಕ್, ಜೇವರ್ಗಿ ಹಳೆಯ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಬಾಡಿಗೆ ಕೊಡುವುದಿದೆ ಎಂದು ಒಎಲ್‌ಎಕ್ಸ್ನಲ್ಲಿ ಹಾಕಿದ್ದರು. ಅದನ್ನು ನೋಡಿದ ಸಂದೀಪ ರಾವತ್ ಎಂಬ ಹೆಸರು ಹೇಳಿ ಕರೆ ಮಾಡಿ, ನಾನು ಆರ್ಮಿ ಆಫಿಸರ್, ಕಲಬುರಗಿಗೆ  ವರ್ಗಾವಣೆ ಆಗಿದೆ.  ನಿಮ್ಮ ಮನೆಯ ಪೋಟೋ ನೋಡಿ ಇಷ್ಟವಾಗಿದೆ. ಬರುತ್ತೇನೆ ಎಂದು ಮಾತನಾಡಿದ್ದಾರೆ. ಬಳಿಕ ಜೋರಾಸಿಂಗ್ ಎಂಬುವರು ಕರೆ ಮಾಡಿ  ಇಂಡಿಯನ್ ಆರ್ಮಿ ಫೈನಾನ್ಸ್ ಅಧಿಕಾರಿಯಾಗಿz್ದೆÃನೆ, ನಾನು ಕಲಬುರಗಿಗೆ ಬರುತ್ತಿದ್ದು,ನಿಮ್ಮ ಮನೆ ಬಾಡಿಗೆ ಕೊಡುವ ಬಗ್ಗೆ ಮಾತನಾಡಿದ್ದಾರೆ.
ಇಬ್ಬರ ಮಾತನ್ನು ಅಬ್ದುಲ್‌ಖದೀರ ನಂಬಿದ್ದಾರೆ. ಆರ್ಮಿ ಅಧಿಕಾರಿಗಳು  ಎಂದು ಹೇಳಿ, ಹಣ ಹಾಕಿ ಮರಳಿ ಕೊಡುತ್ತೇವೆ ಎಂದಿದ್ದಾರೆ. ಮೊದಲು ಹಾಕಿದ ಹಣ ಮರಳಿ ಜಮಾ ಮಾಡಿದ್ಧಾರೆ. ಕ್ರಮೇಣ ಹಾಗೆ ಹೇಳಿ ಹಲವು ಸಲ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.ನAತರ ಹಣ ಹೇಳಿದಾಗ ಕೊಡದೆ ಮೊಬೈಲ್ ಬಂದ್ ಮಾಡಿದ್ದಾರೆ. ೨೦.೨೨ ಲಕ್ಷ ರೂ.ಗಳನ್ನು  ಎರಡು ಖಾತೆಗಳಿಂದ ಮೋಸಗಾರರಿಗೆ ವರ್ಗಾವಣೆ ಮಾಡಿದ್ದಾರೆ.  ಈ ಕುರಿತು ಸೆನ್ ಠಾಣೆಗೆ ದೂರು ನೀಡಿದ್ದಾರೆ.