ಜಿಲ್ಲೆ

ಆರ್‌ಪಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾಳೆ

ಹಾಸನ : ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ರಾಜ್ಯ ಸಮಿತಿಯ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸೆ.23ರಂದು ಆಯೋಜಿಸಲಾಗಿದೆ ಎಂದು ರಾಜ್ಯ ಸಮಿತಿ ಅಧ್ಯಕ್ಷ ಆರ್‌ಪಿಐ ಸತೀಶ್ ತಿಳಿಸಿದರು.

ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಮಾನವತೆಯ ಮಹದಾಸೆಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವಂತಂತ್ರ ಭಾರತದ ಸಂವಿಧಾನವನ್ನು ಬರೆದುಕೊಟ್ಟರು. ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳನ್ನು ಆಡಳಿತದಲ್ಲಿ ಅಳವಡಿಸುವ ರಾಜಕೀಯ ಪಕ್ಷವೊಂದರ ಅವಶ್ಯಕತೆ ಕಂಡು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಪಕ್ಷವನ್ನು ಆರಂಭಿಸಿದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸ್ತುತ ಕರ್ನಾಟಕದಲ್ಲಿ ಯುವ ನಾಯಕತ್ವದ ರಾಜ್ಯ ಸಮಿತಿಯ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ ಸೆ. 23ರ ಶನಿವಾರ ಬೆಳಗ್ಗೆ ಹಾಸನ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಮಾನ ಮನಸ್ಕರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳಾದ ನಿಟ್ಟೂರು ಬೂದೇಶ್, ನಟರಾಜ್, ಕುಮಾರ್, ಹರೀಶ್ ಕುಮಾರ್, ಯೋಗೀಶ್ ಹಾಜರಿದ್ದರು.