ಬಳ್ಳಾರಿ : ಕಳೆದ ಹತ್ತು ವರ್ಷಗಳಲ್ಲಿ ಆರ್ಥಿಕತೆಯಲ್ಲಿ ಭಾರತ ದೇಶ ಐದನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಬಿಪಿಎಸ್‌ಸಿ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಈಶಾನ್ಯ ಪದವೀರ ಕ್ಷೇತ್ರದ ಚುನಾವಣೆಯ ಮತದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ ಯಾವ ದೇಶ ತಾಕತ್ತು ಪಡೆಯುತ್ತವೋ ಅಂತಹ ದೇಶವನ್ನು ಇತರೆ ದೇಶಗಳು ಗೌರವಿಸುತ್ತವೆ. 2004 ರಿಂದ 2014 ರವರೆಗೆ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆಗಿದೆ. ಆದರೆ 2014 ರಿಂದ 2024 ತನಕ ಒಂದೇ ಒಂದು ಪೈಸ್ ಭ್ರಷ್ಟಾಚಾರವಾಗಿಲ್ಲ ಎಂದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲಿದ್ದಾರೆ. ಪ್ರಪಂಚದಲ್ಲಿ ನಮ್ಮ ಭಾರತದ ಯುವ ಮತ್ತು ಜನಸಂಖ್ಯೆ ದೇಶವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಪಂಚದ ಐದು ಆರ್ಥಿಕತೆಯ ದುರ್ಬಲ ದೇಶಗಳಲ್ಲಿ ಭಾರತ ದೇಶ ಒಂದಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕ ದೇಶ ಸದೃಢವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಬಿಜೆಪಿ ಮುಖಂಡರಾದ ಡಾ.ಮಹಿಪಾಲ್, ಯಶಂತ್‌ರಾಜ್ ಭೂಪಾಲ್, ರಾಮಲಿಂಗಪ್ಪ, ಸೇರಿದಂತೆ ಇತರರಿದ್ದರು.