ಜಿಲ್ಲೆ

ಆರ್ಥಿಕ ಸ್ವಾವಲಂಬನೆಯಿoದ ಸಮಾನತೆ

ಕಲಬುರಗಿ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಏಳಿಗೆ ಸಾಧ್ಯವಿದೆ. ಆರ್ಥಿಕ ಸಬಲೀಕರಣವಿಲ್ಲದಿದ್ದರೆ ಸ್ತಿçà ಸ್ವಾತಂತ್ರÈ, ಸಮಾನತೆ ಸಂಪೂರ್ಣ ದೊರೆಯುವುದಿಲ್ಲ. ವಿಧಾನಸಭೆ, ಸಂಸತ್ತಿನ ಕಾರಿಡಾರ್‌ಗಳಲ್ಲಿ ನಮ್ಮ ಪಾಲು ದೊರೆತು, ರಾಜಕೀಯ ಶಕ್ತಿ ದೊರೆಯಬೇಕು ಎಂದು ಮಾಜಿ ಸಚಿವೆ, ಬಸವ ಸಮಿತಿ ಉಪಾಧ್ಯಕ್ಷೆ ಡಾ.ಲೀಲಾದೇವಿ ಪ್ರಸಾದ್ ಹೇಳಿದರು.
ನಗರದ ಶರಣಬಸವ ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಶರಣಬಸವೇಶ್ವರ ಸಂಸ್ಥಾನದಿAದ ಕೊಡಮಾಡುವ ಶ್ರೀ ಮಾತೋಶ್ರೀ ಗೋದುತಾಯಿ ಅವ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮಹಿಳೆಯರು ಚುನಾಯಿತರಾಗಿ ಹೊರಹೊಮ್ಮಬೇಕು. ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.
ಪದ್ಮಶ್ರೀ, ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತೆ ನಿಲೀಮಾ ಮಿಶ್ರಾ ಮಾತನಾಡಿದರು.
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪದವಿ ಸ್ವೀಕರಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಣಿ ಅಪ್ಪ ಅವರನ್ನು ಸನ್ಮಾನಿಸಲಾಯಿತು.
ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಮಾತನಾಡಿ, ಶರಣಬಸವ ವಿವಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸ್ತಿçà ಸಬಲೀಕರಣಕ್ಕೆ ವೇದಿಕೆ ಕಲ್ಪಿಸುತ್ತಿದೆ. ಅಧ್ಯಾಪಕರ ನೇಮಕ, ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುತ್ತಿದೆ. ವಿವಿಯಲ್ಲಿ ಶೇ.೬೦ಕ್ಕಿಂತ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಿದ್ದು, ಸ್ತಿçà ಸಬಲೀಕರಣಕ್ಕೆ ಸದಾ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿದರು. ಮಹಾರಾಷ್ಟçದ ಭಗಿನಿ ನಿವೇದಿತಾ ಗ್ರಾಮೀಣ ವಿಜ್ಞಾನ ನಿಕೇತನ್ ಮಾತನಾಡಿದರು.