ಬಾಗಲಕೋಟೆ ನಗರದ ಬಿವಿವಿ ಸಂಘದ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಕಾಲೇಜಿನ ಐಕ್ಯೂಎಸಿ ಘಟಕ, ಪ್ಲೇಸ್ಮೆಂಟ್ ಶೇಲ್ ಹಾಗೂ ಸಮರ್ಥನಂ ಅಂಗವಿಕಲ ಸಂಸ್ಥೆ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಚಾಲನೆ ನೀಡಿದರು.  
ಜಿಲ್ಲೆ

ಆರ್ಥಿಕ ಸಭಲತೆಗೆ ಉದ್ಯೊಗವೇ ಮುಖ್ಯ ಆಯುಧ

ಬಾಗಲಕೋಟೆ: ಉದ್ಯೋಗಂ ಪುರುಷ ಲಕ್ಷಣಂ ಇದ್ದ ನಾನ್ನುಡಿ ಇಂದು ಉದ್ಯೋಗಂ ಮಾನವ ಲಕ್ಷಣಂ ಆಗಿದ್ದು, ಆರ್ಥಿಕ ಸಭಲತೆಗೆ ಉದ್ಯೋಗವೇ ಮುಖ್ಯ ಆಯುಧವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ನಗರದ ಬಿವಿವಿ ಸಂಘದ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಕಾಲೇಜಿನ ಐಕ್ಯೂಎಸಿ ಘಟಕ, ಪ್ಲೇಸ್ಮೆಂಟ್ ಶೇಲ್ ಹಾಗೂ ಸಮರ್ಥನಂ ಅಂಗವಿಕಲ ಸಂಸ್ಥೆ ಬೆಳಗಾವಿ, ಜಿಲ್ಲಾ ಉದ್ಯೋಗ ವಿನಿಮಯ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

ವಿದ್ಯೆಗೆ ತಕ್ಕ ಉದ್ಯೋಗ ಬಹು ಮುಖ್ಯವಾಗಿದ್ದು, ವಿದ್ಯ ಜ್ಞಾನದ ಅರಿವು ನೀಡುತ್ತದೆ, ಜೊತೆಗೆ ಒಂದು ಉದ್ಯೋಗ ಸಿಕ್ಕರೆ ಮನುಷ್ಯನ ಬದುಕು ಪರಿಪೂರ್ಣತೆ ಕಡೆ ಸಾಗುತ್ತದೆ. ಆ ನಿಟ್ಟಿನಲ್ಲಿ ಈ ಉದ್ಯೋಗಮೇಳ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಉದ್ಯೋಗಂ ಮಾನವ ಲಕ್ಷಣಂ ಆಗಿದೆ, ಉದ್ಯೋಗದಿಂದ ಮನುಷ್ಯನ ಗೌರವ ಹೆಚ್ಚುತ್ತದೆ. ಬಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿ, ಉದ್ಯೋಗದಾತರಿಗೂ ಒಳ್ಳೆದಾಗಲಿ. ಇಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು ಧನಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಅಂಗವಿಕಲರು ಬಹಳ ಪ್ರತಿಭಾವಂತರಾಗಿರುತ್ತಾರೆ. ಈ ಉದ್ಯೋಗಮೇಳದಲ್ಲಿ ೨೦೦ಕ್ಕೂ ಹೆಚ್ಚು ಅಂಗವಿಕಲರು ಹಾಗೂ ೩೦೦ಕ್ಕೂ ಹೆಚ್ಚು ಇತರರು ಭಾಗವಹಿಸಿರುವುದು ಹೆಮ್ಮೆ ವಿಷಯ. ಯಾವುದೆ ಉದ್ಯೋಗ ಸಿಕ್ಕರೂ ಅದರಲ್ಲಿ ಕಾರ್ಯನಿರ್ವಹಿಸಿರಿ. ಜೀವನದ ಯಶಸ್ವಿಗೆ ನಾವು ನಮಗೆ ಸಿಕ್ಕ ಮೊದಲ ಉದ್ಯೋಗದಲ್ಲಿ ಮುಂದುವರೆಯಬೇಕು. ಅದರಿಂದ ಬೆಳವಣಿಗೆ ಕಾಣಬಹುದಾಗಿದೆ. ಮೊದಲಿನಿಂದಲೂ ನಮ್ಮ ಸಂಘದ ಶಿಶುವಿಹಾರದಲ್ಲಿ ಅಂಗವಿಕಲರಿಗಾಗಿ ಶಾಲೆ ತೆರೆಯಲಾಗಿದೆ. ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದರು.

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಅರುಣಕುಮಾರ ಎಂ.ಜಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಽಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ಐಕ್ಯೂಎಸಿ ಸಂಯೋಜಕ ಡಾ.ಎ.ಯು.ರಾಠೋಡ, ಎಸ್.ವಿ,ಕಟ್ಟಿ ಸೇರಿದಂತೆ ಇತರರು ಇದ್ದರು. ಶ್ರೇಯಾ ಜೋರಾಪುರ ಪ್ರಾರ್ಥಿಸಿದರು. ಎಸ್.ಡಿ.ಕೆಂಗಲಗುತ್ತಿ ನಿರೂಪಿಸಿದರು.