ಕಲಬುರಗಿ: ವಿಶ್ವವಿದ್ಯಾಲಯಗಳು ಗ್ರಾಮಗಳ ಪ್ರಗತಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಕೌಶಲ ಮತ್ತು ಆರ್ಥಿಕ ಮೌಲ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿವಿಯಲ್ಲಿ ಸಮಾಜಕಾರ್ಯ ವಿಭಾಗ ಗುಂಜಬಬಲಾದ ಗ್ರಾಮದ ಮಹಿಳಾ ಉತ್ಪಾದಕರ ಸಂಘಗಳ ಸದಸ್ಯರಿಗೆ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಅಡಿ ಶುಕ್ರವಾರ ಏರ್ಪಡಿಸಿದ್ದ ದೀನದಯಾಳ್ ಅಂತ್ಯೋದಯ ಯೋಜನೆಗೆ ಉತ್ಪನ್ನ-ಅಭಿವೃದ್ಧಿ ಮತ್ತು ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ಗುಂಪುಗಳ ಸಬಲೀಕರಣಕ್ಕಾಗಿ ವಿವಿ-ಸಮುದಾಯ ತೊಡಗಿಸಿಕೊಳ್ಳುವುದು ಮುಖ್ಯ. ಸುಸ್ಥಿರ ಜೀವನೋಪಾಯದ ಅವಕಾಶ ಕಾಪಾಡಿ ಉತ್ಪನ್ನ ಅಭಿವೃದ್ಧಿ ಮತ್ತು ಮಾರಾಟ ಮಾಡಲು ಮಹಿಳೆಯರು ಕೌಶಲ ತರಬೇತಿ ಪಡೆದುಕೊಳ್ಳಬೇಕು. ಉತ್ತಮ ಆರೋಗ್ಯ ಮತ್ತು ಪೋಷಣೆಗೆ ಹಿತ್ತಲಿನ ತರಕಾರಿ ತೋಟ ಉತ್ತೇಜಿಸುವ ಮೂಲಕ ಮಹಿಳೆಯರು ಮನೆ ಮಟ್ಟದಲ್ಲಿ ಸೂಕ್ಷö್ಮ ಉಪಕ್ರಮ ತೆಗೆದುಕೊಳ್ಳಬೇಕಾಗಿದೆ. ಕೌಶಲ ಅಭಿವೃದ್ಧಿ ತರಬೇತಿಗಳು ವಿವಿಧ ಆಹಾರ ಧಾನ್ಯ ಮತ್ತು ಟೊಮ್ಯಾಟೊದಿಂದ ಸಂಸ್ಕರಿಸಿದ ಉಪ್ಪಿನಕಾಯಿ ಇತರ ಉತ್ಪನ್ನಗಳಾಗಿ ಪರಿವರ್ತಿಸಲು ನವೀನ ವಿಧಾನ ಒದಗಿಸುತ್ತವೆ. ಗುಂಜಬಬಲಾದ ಗ್ರಾಮದ ಮಹಿಳಾ ಉತ್ಪಾದಕ ಗುಂಪುಗಳಿಗೆ ಸಿಯುಕೆ ಸದಾ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಡಾ.ಅಂಬರೀಶ್ ಗಣಾಚಾರಿ ಮಾತನಾಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಪವಿತ್ರಾ ಆಲೂರ ಮಾತನಾಡಿ, ಮಹಿಳೆಯರು ಜೀವನೋಪಾಯದ ಸ್ಥಿತಿ ಸುಧಾರಿಸಲು ಹೊಸ ಉತ್ಪನ್ನ ತಯಾರಿಕೆ ಕಲಿಯುವ ಉತ್ಸಾಹ ಪ್ರಶಂಸನೀಯ ಎಂದರು.
ಪ್ರೊ.ಚನ್ನವೀರ ಆರ್.ಎಂ., ಜಿಪಂ ಎನ್‌ಆರ್‌ಎಲ್‌ಎಂ ಅಧಿಕಾರಿ ಅಭಿಜಿತ್, ಗುಂಜಬಬಲಾದ್ ಶಾಲೆ ಮುಖ್ಯಶಿಕ್ಷಕ ನಿಂಗಪ್ಪ ಇತರರಿದ್ದರು.