ಬಾಗಲಕೋಟೆ ನಗರದಲ್ಲಿ ಶನಿವಾರ ಶಾಸಕ ಎಚ್.ವೈ.ಮೇಟಿ -Éಡರೇಶನ್ ಆ-ï ಬಾಗಲಕೋಟ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ಆರ್ಥಿಕ ಪುನಶ್ಚೇತನಕ್ಕೆ ೨೦೦ ಎಕರೇ ಕಾಯ್ದಿರಿಸಿ

ಬಾಗಲಕೋಟೆ: ಮುಳಗಡೆಯಿಂದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಬಾಗಲಕೋಟೆ ನಗರ ಹಾಗೂ ವ್ಯಾಪಾರಕ್ಕೆ ಆರ್ಥಿಕ ಪುನಶ್ಚೇತನಕ್ಕೆ ಎರಡು ಎಕರೇ ಭೂಮಿ ನವನಗರದ ಯೂನಿರ್ಟ-೩ ಮೀಸಲಿಡಬೇಕು ಎಂದು ಆಗ್ರಹಿಸಿ -ೆಡರೇಶನ್ ಆ-ï ಬಾಗಲಕೋಟ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಬಾಗಲಕೋಟೆ ನಗರದಲ್ಲಿ ಶನಿವಾರ ಶಾಸಕ ಎಚ್.ವೈ.ಮೇಟಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ ಅವರಿಗೆ ಮನವಿ ಸಲ್ಲಿಸಿದ ಅಸೋಸಿಯೇಷನ್ ನೇತೃತ್ವದಲ್ಲಿ ವ್ಯಾಪಾರಸ್ಥರು ಬಾಗಲಕೋಟೆ ನಗರದ ಬೆಳವಣಿಗೆಗೆ ವಿಶೇಷವಾದ ಕಾಳಜಿ ವಹಿಸಬೇಕಿದೆ. ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಒಂದೇ ಸೂರಿನಡಿ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

ಬಾಗಲಕೋಟೆ ನಗರದ ಮಾರುಕಟ್ಟೆ ಉದ್ದೇಶಕ್ಕಾಗಿ ಎರಡು ನೂರು ಎಕರೇ ಕಾಯ್ದಿರಿಸಬೇಕು. ಸಗಟು, ಚಿಲ್ಲರೆ ಮಾರುಕಟ್ಟೆಗೆ ಪ್ರೋತ್ಸಾಹ ನೀಡಬೇಕಿದೆ. ತನ್ಮೂಲಕ ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸಬೇಕಿದೆ. ಉದ್ಯೋಗ ಸೃಷ್ಟಿ, ಮೂಲ ಸೌಕರ್ಯ ಹೆಚ್ಚಳಕ್ಕೆ ಒತ್ತು ನೀಡಬೇಕಿದೆ. ಸದ್ಯ ಯೂನಿಟ್-೩ ವಸತಿ ಉದ್ದೇಶಕ್ಕೆ ಮಾತ್ರ ವಿನ್ಯಾಸಗೊಳಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಶೇ.೨ ಪ್ರದೇಶ ಮೀಸಲಿಡಲಾಗಿದೆ. ಪ್ರತಿ ಸೆಕ್ಟರ್‌ಗಳಲ್ಲಿ ಮಾರುಕಟ್ಟೆ ರೂಪಿಸುವದರಿಂದ ಸಮರ್ಪಕವಾಗಿ ಆಗುತ್ತಿಲ್ಲ. ಸರ್ಕಾರದ ಯೋಜನೆ ಸದ್ಬಳಕೆಯಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಾಗಲಕೋಟೆ ವ್ಯಾಪಾರವು ಸಂಪೂರ್ಣ ಕುಸಿತವಾಗಿದೆ ಎಂದು ದೂರಿದರು.

ಎರಡು ನೂತು ಎಕರೇ ಪ್ರದೇಶದಲ್ಲಿ ಮೂಲ ಸೌಕರ್ಯ ಮರುಸ್ಥಾಪನೆ, ಕೈಗಾರಿಕಾ ಅಭಿವೃದ್ಧಿ ಪ್ರದೇಶ, ಪ್ರವಾಸೋದ್ಯಮ ಉತ್ತೇಜನ, ಕೃಷಿ ಆಧುನೀಕರಣ, ಸುಸ್ಥಿರ ಆರ್ಥಿಕ ಬೆಳವಣಿಗೆ ಕೇಂದ್ರಿಕರಿಸಿ ಬಾಗಲಕೋಟೆ ಪುನರುಜ್ಜೀವನಗೊಳಿಸಬೇಕು. ವಿವಿಧ ಕೈಗಾರಿಕೆಗಳಿಗೆ ನಿಽðಷ್ಟ ವಲಯಗಳನ್ನು ಗೊತ್ತುಪಡಿಸುವುದು, ರಸ್ತೆ, ನೀರು, ವಿದ್ಯುತ್ ನಂತಹ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು, ಪರಿಸರ ಸ್ನೇಹಿ, ಸುಸ್ಥಿರ ವ್ಯವಹಾರಗಳಿಗೆ ತೆರಿಗೆ ವಿನಾಯಿತಿ ನೀಡುವುದು, ಪಾರದರ್ಶಕ ಕಾಪಾಡಬೇಕು ಎಂದು ಮನವಿ ಮಾಡಿದರು.

ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಡಾ.ಶೇಖರ ಮಾನೆ, ಮುಖಂಡರಾದ ರವಿ ಕುಮಟಗಿ, ರಾಮ ಮುಂದಡಾ, ವೀರುಪಾಕ್ಷಿ ಅಮೃತಕರ, ನಾಗರಾಜ ಕುಪ್ಪಸ್ತ, ದಿನೇಶ ಬಾರ್ಸಿ, ಶಿವಕುಮಾರ ನಂದಿಕೋಲಮಠ, ಪಿ.ಎ.ಬೇತಾಳ, ಶ್ರೀನಿವಾಸ ಬಳ್ಳಾರಿ, ರಮೇಶ ಕಂದಕೂರ, ಪ್ರಭು ಮೊರಬದ, ರಾಜು ಪುಕರೇಜಾ, ಶ್ರೀಧರ ಮಾಲಾಪಾಣಿ, ಬಸವರಾಜ ಧರ್ಮಂತಿ, ವಿಠ್ಠಲ ಕಾಸಟ್, ವಿಮಲ್ ಬೇತಾಳ, ರಾಜು ನಾಯಕ ಇತರರು ಇದ್ದರು.