ಜಿಲ್ಲೆ

ಆರ್‌ಎಸ್‌ಎಸ್ ಮುಖಂಡನ ಗಡಿಪಾರಿಗೆ ಆಗ್ರಹ

Chitradurga - Desk - Pranav Kumar

ಚಿತ್ರದುರ್ಗ: ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಮೆರವಣಿಗೆ ನಡೆಸಿದರು. ಪ್ರಭಾಕರ್ ವಿರುದ್ಧ ಘೋಷಣೆ ಕೂಗಿದರು. ಗಡಿಪಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಮಂಡ್ಯದಲ್ಲಿ ಈಚೆಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಹೀನಾಯವಾಗಿ ಹೇಳಿಕೆ ನೀಡಿ, ಇಸ್ಲಾಂ ಧರ್ಮಕ್ಕೆ ಅವಮಾನಿಸಿದ್ದು, ಸಮಾಜದಲ್ಲಿ ಶಾಂತಿ ಕದಡಲು ಹೊರಟಿರುವ ಪ್ರಭಾಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ವಕ್ಫೃ್ ಬೋರ್ಡ್ ಅಧ್ಯಕ್ಷ ಎಂಸಿಒ ಬಾಬು, ಮುಖಂಡರಾದ ಮಹಮದ್ ಅಹಮದ್ ಪಾಷ, ನಸ್ರುಲ್ಲಾ, ಸಯೀದು, ಎಚ್.ಕೆ.ಖಾದರ್‌ಖಾನ್, ಸಾಧಿಕ್ ಉಲ್ಲಾ, ಸೈಯದ್ ಖುದ್ದೂಸ್, ಮಹಮದ್ ರಫಿ, ಸುಬಾನುಲ್ಲಾ, ಗುಡ್‌ಲಕ್ ಇಮ್ತಿಯಾಜ್ ಇತರರಿದ್ದರು.