ಚಿತ್ರದುರ್ಗ: ದೇಶದಲ್ಲಿ ವಿಷ ಸರ್ಪ ಎನ್ನುವುದಿದ್ದರೆ ಅದು ಕಾಂಗ್ರೆಸ್ಸೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು. ನಗರದಲ್ಲಿ ಗುರು ವಾರ ಸುದ್ದಿಗಾರರೊಂದಿಗೆ ಮಾತನಾಡಿ,ಬಿಜೆಪಿ,ಆರ್‌ಎಸ್‌ಎಸ್ ವಿಷ ಸರ್ಪವಿದ್ದಂತೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ ರ ಹೇಳಿಕೆಗೆ ತಿರುಗೇಟು ನೀಡಿದರು.
ಭಾರತಕ್ಕೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ದ್ರೋಹ ಮಾಡಿದ್ದು ಕಾಂಗ್ರೆ ಸ್. ಅವರ ಅಂತಿಮ ಸಂಸ್ಕಾರಕ್ಕೆ ಹೊಸದಿಲ್ಲಿಯಲ್ಲಿ 6/3 ಅಡಿ ಜಾಗ ಕೊಡದ ಕಾಂಗ್ರೆಸ್,60ವರ್ಷಗಳ ತನ್ನ ಆಡಳಿತಾವಧಿಯಲ್ಲಿ ದಲಿತರಿ ಗೆ ಶಿಕ್ಷಣ,ಉದ್ಯೋಗ ಕೊಡಲಿಲ್ಲ.ಅಸ್ಪಶ್ಯತೆಯನ್ನೂ ನಿವಾರಿಸಲು ಸಾಧ್ಯವಾಗದ ಕಾಂಗ್ರೆಸ್ಸಿನ ಹಾಗೂ ನೆಹರು ಮನೆತನದ ಮನಸ್ಥಿತಿ ಎಂಥ ದ್ದು,ಯಾವುದು ವಿಷ ಸರ್ಪ ಎಂಬುದನ್ನು ಖರ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕು. ಆರ್‌ಎಸ್‌ಎಸ್ ಅರಿಯಲು ಖರ್ಗೆ ಅವರು ನಾಗಪುರಕ್ಕೆ ಬರಲಿ ಎಂದು ಆಹ್ವಾನಿಸಿದರು.
ಕರ್ನಾಟಕದಲ್ಲಿ ಸರ್ಕಾರ ಇದೇಯೇ ಎಂಬ ಅನುಮಾನ ವ್ಯಕ್ತಪಡಿಸಿದ ಅವರು,ಕಾಂಗ್ರೆಸ್ ಶಾಸಕರಿಗೆ 25 ಕೋಟಿ ರೂ.ಅನುದಾನ ಬಿ ಡುಗಡೆ ಮಾಡಲಾಗಿದೆ ಹೊರತು ಪ್ರತಿಪಕ್ಷಗಳ ಶಾಸಕರ ಕ್ಷೇತ್ರಕ್ಕೆ ಬಿಡಿಗಾಸು ಕೊಟ್ಟಿಲ್ಲ. ಒಂದೂವರೆ ವರ್ಷದಿಂದ ಅಭಿವೃದ್ಧಿ ಕೆಲಸಗಳಾಗಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರ ಟಾರ್ಗೆಟ್ ಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಾಕ್ಸ್.
ಇಂದು ಬಿಜೆಪಿ ಪ್ರತಿಭಟನೆ
ವಕ್ಫ್ ನಡೆ ವಿರೋಧಿಸಿ ಬಿಜೆಪಿ ಹೋರಾಟ ಆರಂಭಿಸಿದ್ದು,ನ.22ರಂದು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂ ಸದ ಗೋವಿಂದ ಎಂ.ಕಾರಜೋಳ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹ ಲವೆಡೆ ವಕ್ಫ್ ಹೆಸರಲ್ಲಿ ಆಸ್ತಿ ಕಬಳಿಕೆ ಪ್ರಯತ್ನಗಳಾಗಿವೆ. ಚಿತ್ರದುರ್ಗದಲ್ಲೂ ಆಗಿರುವ ಮಾಹಿತಿ ಇದೆ. ವಕ್ಫ್‌ಗೆ ಸೇರಿದ ಬಹುತೇಕ ಆಸ್ತಿಯ ನ್ನು ಕಾಂಗ್ರೆಸ್ ಮುಖಂಡರು ಒತ್ತುವರಿ ಮಾಡಿಕೊಂಡಿದ್ದಾರೆಂದು ಅನ್ವರ್‌ಮಾಣಿಪ್ಪಾಡಿ ಹೇಳಿದೆ. ವಕ್ಫ್ ವಿವಾದ ವಿರುದ್ಧದ ಹೋರಾಟದ ಲ್ಲಿ ಬಿಜೆಪಿಯಲ್ಲಿ ಬಣಗಳಿಲ್ಲ.ಸಚಿವ ಜಮೀರ್‌ಅಹಮದ್‌ವಿಜಯಪುರದಲ್ಲಿ ಅಧಿಕಾರಿಗಳಿಗೆ ನೀಡಿದ್ದ ಕೆಟ್ಟ ಸೂಚನೆ ವಿರುದ್ಧ ಬಸವನಗೌ ಡ ಪಾಟೀಲ್‌ಯತ್ನಾಳ್ ದನಿ ಎತ್ತಿದ್ದರು.
ನನ್ನ ಅಧ್ಯಕ್ಷತೆ ಸತ್ಯ ಶೋಧನಾ ಸಮಿತಿ,ಜಮೀನು,ಮಠಮಾನ್ಯ,ಮಂದಿರಗಳಿಗೆ ಭೇಟಿ ನೀಡಿ ಪರಿಶೀಲಿಸಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ. ಈ ವರದಿಯನ್ನು ಸಂಸತ್ತಿನ ಜಂಟಿ ಸದನ ಸಮಿತಿ ಅಧ್ಯಕ್ಷ ನಾಗಲಾಂಬಿಕಾ ಪಾಲ್ ಅವರಿಗೆ ಸಲ್ಲಿ ಸಲಾಗುವುದು. ಈ ವಿಷಯ ಸದ್ಯದಲ್ಲೇ ನಡೆಯಲಿರುವ ಸಂಸತ್ ಅಧಿವೇಶನದಲ್ಲೂ ಚರ್ಚೆಗೆ ಬರಲಿದೆ ಎಂದರು. ಎಂಎಲ್‌ಸಿ ಕೆ.ಎಸ್.ನವೀನ್,ಜಿಲ್ಲಾಧ್ಯಕ್ಷ ಮುರಳಿ,ಮಾಜಿ ಶಾಸಕ ತಿಪ್ಪೇಸ್ವಾಮಿನೇರ‌್ಲಗುಂಟೆ,ದತ್ತಾತ್ರೇಯ, ಮಲ್ಲಿಕಾರ್ಜನ್,ನವೀನ್‌ಚಾಲುಕ್ಯ, ರಾಮರೆಡ್ಡಿ,ಸ್ವಾಮಿ, ಶಿವಣ್ಣ,ನಾಗರಾಜ್‌ಬೇದ್ರೆ ಇತರರು ಇದ್ದರು.
----