ಚಿಕ್ಕಮಗಳೂರು ನಗರದ ಸೂಕ್ಷö್ಮ ಪ್ರದೇಶದಲ್ಲಿ ದತ್ತ ಜಯಂತಿ ಅಂಗವಾಗಿ ಆರ್‌ಎಎಫ್ ಪಡೆ ಹಾಗೂ ಪೊಲೀಸರು ರೂಟ್ ಮಾರ್ಚ್ ನಡೆಸಿದರು. 
ಜಿಲ್ಲೆ

ಆರ್‌ಎಎಫ್ ರೂಟ್ ಮಾರ್ಚ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶುಕ್ರವಾರದಿಂದ ೯ ದಿನಗಳ ಕಾಲ ದತ್ತ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ನಗರ ಖಾಕಿ-ಕೇಸರಿ ನಾಡಾಗಿ ಪರಿವರ್ತನೆ ಹೊಂದಲಿದೆ. ಇಂದಿನಿAದ ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್ ಆಗಿರಲಿದೆ. ನಗರದಲ್ಲಿ ಪೊಲೀಸರು ಹಾಗೂ ವಿಶೇಷ ತುಕಡಿಗಳ ಪಥ ಸಂಚಲನ ಶುಕ್ರವಾರ ನಡೆಯಿತು. ಆರ್‌ಎಎಫ್ ಪಡೆಯಿಂದ ಸೂಕ್ಷö್ಮಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

ನಗರದ ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್‌ಎಎಫ್ ರೂಟ್ ಮಾರ್ಚ್ ನಡೆಸಿದ್ದು, ಶಸಸ್ತç ಸಜ್ಜಿತ ಪೊಲೀಸ್ ತುಕಡಿಗಳು ಕೂಡಾ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಬಾಬುದ್ದೀನ್, ಎಎಸ್‌ಐ ನವೀನ್ ಕುಮಾರ್ ಸೇರಿದಂತೆ ಅಧಿಕಾರಿಗಳು ರೂಟ್ ಮಾರ್ಚ್ ನೇತೃತ್ವ ವಹಿಸಿದ್ದರು. ಸಾರ್ವಜನಿಕರಲ್ಲಿ ನಿರ್ಭೀತಿ ಮೂಡಿಸಲು, ಅಶಾಂತಿ ಸೃಷ್ಟಿಸುವ ಸಮಾಜ ಘಾತುಕರಿಗೆ ಎಚ್ಚರಿಕೆ ನೀಡಲು ಪಥ ಸಂಚಲನ ನಡೆಸಲಾಯಿತು.