ಜಿಲ್ಲೆ

ಆರ್.ರಾಜೇಂದ್ರ ಅವಿರೋಧ ಆಯ್ಕೆ

ಕೊಳ್ಳೇಗಾಲ: ತಾಲೂಕು ಕೃಷಿ ಸಮಾಜದ ಅಧ್ಯಕ್ಷರಾಗಿ ಆರ್.ರಾಜೇಂದ್ರ ಅವಿರೋಧವಾಗಿ ಆಯ್ಕೆಯಾದರು.

ಡಿ.30ರಂದು ಸಂಘದ ಕಚೇರಿಯಲ್ಲಿ 11 ಜನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ನಾಮಪತ್ರ ಸಲ್ಲಿಸಿದ್ದ ಎಸ್.ಶಿವಮೂರ್ತಿ, ಚಿಕ್ಕಣ್ಣಸ್ವಾಮಿ, ಎಸ್.ಬಸವರಾಜು, ವಿ.ವಿ.ಪ್ರಸಾದ್, ವಿ.ಉಮೇಶ್ ಬಾಬು, ಎಂ.ಶಿವಸ್ವಾಮಿ, ಎಂ.ಎಸ್.ನಾಗರಾಜಪ್ಪ, ಎಸ್.ಪಿ.ನಿಂಗರಾಜು, ಎಸ್.ರಾಜು, ಆರ್.ರಾಜೇಂದ್ರ, ಕೆ.ರಘು ನಿರ್ದೇಶಕರಾಗಿ ಆಯ್ಕೆಯಾದರು. ಬಳಿಕ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ರಾಜೇಂದ್ರ, ಉಪಾಧ್ಯಕ್ಷರಾಗಿ ಎಸ್.ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ.ನಿಂಗರಾಜು, ಖಜಾಂಚಿಯಾಗಿ ವಿ.ಉಮೇಶ್‌ಬಾಬು, ಜಿಲ್ಲಾ ಪ್ರತಿನಿಧಿಯಾಗಿ ವಿ.ವಿ.ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.