ಕಮಲನಗರದ ಹೊರವಲಯದ ಹೊಲದಲ್ಲಿ ಗೋಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ವೈದಿಕ ಹಿಂದು ವಾರಕರಿ ಬಹುದ್ದೇಶಿಯ ಸೇವಾ ಸಂಘ ಪಂಢರಪುರ ಮತ್ತು ಪಟ್ಟಣದ ಹಿಂದು ಸಂಘಟನೆ ಕಾರ್ಯಕರ್ತರು ಮಂಗಳವಾರ ಪೊಲೀಸ್ ಠಾಣೆಗೆ ತೆರಳಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು. 
ಜಿಲ್ಲೆ

ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಕಮಲನಗರ: ಪಟ್ಟಣದ ಹೊರವಲಯದ ಹೊಲದಲ್ಲಿ ಗೋಹತ್ಯೆ ಮಾಡಿದ ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ವೈದಿಕ ಹಿಂದು ವಾರಕರಿ ಬಹುದ್ದೇಶಿಯ ಸೇವಾ ಸಂಘ ಮತ್ತು ಪಟ್ಟಣದ ಹಿಂದು ಸಂಘಟನೆ ಕಾರ್ಯಕರ್ತರು ಮಂಗಳವಾರ ಪೊಲೀಸ್ ಠಾಣೆಗೆ ತೆರಳಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಹಿಂದು ಧರ್ಮದಲ್ಲಿ ಗೋಮಾತೆಗೆ ಅತ್ಯಂತ ಪೂಜ್ಯನೀಯ ಮತ್ತು ಗೌರವಿಸುವ ಸನಾತನ ಸಂಸ್ಕೃತಿಯಾಗಿದೆ. ಸಂವಿಧಾನದ ೪೮ನೇ ವಿಧಿಯಲ್ಲಿ ಹಸು, ಕರುಗಳು ಮತ್ತು ಇನ್ನಿತರ ಪ್ರಾಣಿಗಳ ಹತ್ಯೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆದರೆ ರಾಜಕೀಯ ಒಲೈಕೆಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ವಿಫಲವಾಗಿದೆ. ಗೋಹತ್ಯೆ ಪ್ರಕರಣದಲ್ಲಿ ಬಂಧಿತ ನಾಲ್ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ ಜುಲ್ಪೆ, ಸದಸ್ಯ ಬಾಲಾಜಿ ತೆಲಂಗ್, ಮುಖಂಡರಾದ ಶಿವಾನಂದ ವಡ್ಡೆ, ರಾಜಕುಮಾರ ಬಿರಾದಾರ, ಗಿರಿರಾಜ ಚಿಮ್ಮಾ, ಪ್ರಶಾಂತ ಖಾನಾಪುರೆ, ಪ್ರವೀಣ ಮಹಾರಾಜ, ಯೋಗೇಶ ಮಹಾರಾಜ, ನಾಮದೇವ ಸಗರ, ಬಸವರಾಜ ಪಾಟೀಲ, ಸಂಜುಕುಮಾರ ನಿಟ್ಟೂರೆ, ಸಂತೋಷ ಸೋಲ್ಲಾಪುರೆ, ಗುರುನಾಥ ಬಿರಾದಾರ, ಪಂಡಿತ ಪಾಟೀಲ, ಶಾಂತಕುಮಾರ ಬಿರಾದಾರ, ಬಾಲಾಜಿ ಮಹಾಜನ, ಶೇಖರ ಮಹಾಜನ, ರಾಜಕುಮಾರ ಗಾಯಕವಾಡ, ಪ್ರಕಾಶ ಹುಲಸೂರೆ, ಗಂಗಾಧರ ಸೋಲಾಪೂರೆ, ಚಂದ್ರಕಾಂತ ಸಂಗಮೆ, ಆನಂದ ಬಿರಾದಾರ ಇತರರಿದ್ದರು.