ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಮೂರು ವರ್ಷಗಳಿಗಿಂತ ಅಧಿಕ ಶಿಕ್ಷೆಗೆ ಗುರಿಯಾಗುವಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳ ಸಂಪೂರ್ಣ ಜಾತಕ ಸಿದ್ಧಪಡಿಸಲು ರಾಜ್ಯದ ಎಲ್ಲ ಜಿಲ್ಲೆಗಳು,ಪೊಲೀಸ್ ಕಮಿಷನ್‌ರೇಟ್ ವ್ಯಾಪ್ತಿಯ ನಗರಗಳು ಹಾಗೂ ಕರ್ನಾಟಕ ರೈಲ್ವೇಸ್ ಒಳಗೊಂಡಂತೆ ಮೆಸರ್‌ಮೆಂಟ್ ಕಲೆಕ್ಷನ್ ಯೂನಿಟ್(ಎಂಸಿಯು)ಆರಂಭಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಕ್ರಿಮಿನಲ್ ಪ್ರೊಸೀಜರ್(ಐಡೆಂಟೆಫೀಕೇಷನ್)ಆಕ್ಟ್ 2022ರಡಿ ಎಂಸಿಯುಗಳನ್ನು ಪ್ರಾರಂಭಿಸಲಾಗುತ್ತಿದೆ.ರಾಜ್ಯದ ಎಲ್ಲ ಠಾಣೆಗಳ ಲ್ಲೂ ಈ ಯೂನಿಟ್ ಆರಂಭಿಸುವ ಉದ್ದೇಶವಿದ್ದು,ಸದ್ಯಕ್ಕೆ ಎಲ್ಲ ಜಿಲ್ಲಾ ಪೊಲೀಸ್ ಕಚೇರಿ ಅಥವಾ ಜಿಲ್ಲಾ ಕೇಂದ್ರದ ಠಾಣೆಯೊಂದರಲ್ಲಿ ಆರಂಭಿಸಲಾಗುತ್ತಿದೆ. ನೋಡೆಲ್ ಅಧಿಕಾರಿಯಾಗಿ ನೇಮಕವಾಗಿರುವ ಇನ್ಸ್‌ಪೆಕ್ಟರ್ ಒಬ್ಬರ ಉಸ್ತುವಾರಿಯಲ್ಲಿ ಈ ಯೂನಿಟ್‌ಗಳು ಕಾರ‌್ಯ ನಿರ್ವಹಿಸಲಿವೆ.
ಎತ್ತರ,ತೂಕ,ಭಾವಚಿತ್ರ,ಹಸ್ತರೇಖೆ,ಹೆಜ್ಜೆ ಗುರುತು,ಕಣ್ಣಿನ ರೇಖೆ,ಡಿಎನ್‌ಎ ಪರೀಕ್ಷೆಗೆ ಪೂರಕವಾಗಿ ರಕ್ತ ಮತ್ತು ಜೊಲ್ಲು ಸಂಗ್ರಹ, ಸ ಹಿ ಮತ್ತು ಬೆರವಣಿಗೆಯೊಂದಿಗೆ ಬಂಧಿತ ಆರೋಪಿಯ ಸಂಪೂರ್ಣ ಜಾತಕ ಸಿದ್ಧಪಡಿಸಿ ಇಟ್ಟುಕೊಳ್ಳಲಾಗುತ್ತದೆ. ತನಿಖೆ ವೇಳೆ ಈ ಎಲ್ಲ ವಿ ವರಗಳನ್ನು(ಜ್ಚಿಚ್ಝ ಅಠಿಠ್ಟಿಜಿಚ್ಠಿಠಿಛಿ)ಕಡ್ಡಾಯವಾಗಿ ಬಳಸಿಕೊಳ್ಳಲು ಇಲಾಖೆ ಪ್ಲಾೃನ್ ಮಾಡಿದೆ. ಸಿಸಿ ಟಿವಿ ಕ್ಯಾಮರಾಗಳಲ್ಲಿ ಆ ರೋಪಿ ದೃಶ್ಯ ಸೆರೆಯಾದರೆ ಆತನ ಪತ್ತೆ ಸುಲಭವಾಗಲಿ ಎಂಬ ಕಾರಣಕ್ಕೆ 18 ಆಂಗ್ಯಲ್‌ಗಳಲ್ಲಿ ಆರೋಪಿಯ ಭಾವಚಿತ್ರಗಳನ್ನೂ ಸೆರೆ ಹಿಡಿ ಯಲಾಗುತ್ತದೆ.
ಹೀಗೆ ಸಿದ್ಧಪಡಿಸಿದ ದತ್ತಾಂಶಗಳ ನೈಜತೆ ದೃಢೀಕರಿಸಲು ವಿಶೇಷ ನಿಗಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾಕೆಂದರೆ ದತ್ತಾಂಶ ಆ ಫ್‌ಲೋಡ್ ವೇಳೆ ತಪ್ಪುಗಳಾದರೆ ತಿದ್ದುಪಡಿ ಅಥವಾ ಡಿಲಿಟ್‌ಗೆ ಅವಕಾಶವಿಲ್ಲ. ಆದ್ದರಿಂದ ಬಂಧಿತ ಅಸಾಮಿಯ ವಿವರಗಳ ಭರ್ತಿ ಸಂ ದರ್ಭದಲ್ಲಿ ಯಾವುದೇ ತಪ್ಪುಗಳಾಗದಂತೆ ಎಚ್ಚರ ವಹಿಸಲು ಸಬ್ ಇನ್ಸ್‌ಪೆಕ್ಟರ್‌ಕ್ಕಿಂತ ಮೇಲ್ದರ್ಜೆ ಅಧಿಕಾರಿಗಳಿಬ್ಬರು ಮೇಲ್ವಿಚಾರಣೆ ಕಾ ರ‌್ಯವನ್ನು ನಿರ್ವಹಿಸಲಿದ್ದಾರೆ. ಇಲ್ಲಿ ಕೆಲಸ ಮಾಡುವಂಥ ಅಧಿಕಾರಿ ಸಿಬ್ಬಂದಿ ಸೇವಾವಧಿಗೂ ನಿರ್ದಿಷ್ಟಗೊಳಿಸಲಾಗಿದ್ದು, ಇಂತಿಷ್ಟು ಅವಧಿ ಯೊಳಗೆ ಇವರನ್ನು ವರ್ಗ ಮಾಡದಂತೆಯೂ ನಿರ್ದೇಶಿಸಲಾಗಿದೆ.
ಚಿತ್ರದುರ್ಗದಲ್ಲಿ ನಗರ ಠಾಣೆಯಲ್ಲಿ ಎಂಸಿಯು ಆರಂಭವಾಗಿದೆ. ಸದ್ಯಕ್ಕೆ ಈ ಯೂನಿಟ್‌ನಲ್ಲಿ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿ ಅಪ ರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಬಂಧಿತ ರಾಗುವಂಥ ಆರೋಪಿಗಳ ಭೌತಿಕ ಗುಣಲಕ್ಷಣಗಳನ್ನು ಸಂಗ್ರಹಿಸಲಾಗುತ್ತದೆ. ಅದಕ್ಕೆ ಅಗತ್ಯ ವಿರುವ ಕ್ಯಾಮರಾ,ಬೆರಳಚ್ಚು ಸಂಗ್ರಹಿಸುವ ಲೈವ್‌ಸ್ಕಾೃನರ್,ಐ ಸ್ಕಾೃನರ್,ಡಿಎನ್‌ಎ ವಿವರ ಸಂಗ್ರಹಿಸುವ ಮೊದಲಾದ ಉಪಕರಣಗಳನ್ನು ಅಳವಡಿಸಲಾಗಿದೆ.ಯೂನಿಟ್ ಆರಂಭದ 2 ದಿನದೊಳಗೆ ಮೂವರು ಆರೋಪಿಗಳ ವಿವರ ಸಿದ್ಧಪಡಿಸಲಾಗಿದೆ.
ಕೋಟ್
ಸದ್ಯಕ್ಕೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಠಾಣೆಯಲ್ಲಿ ಎಂಸಿಯು ಪ್ರಾರಂಭಿಸಲಾಗಿದೆ. ಮೂರು ವರ್ಷಕ್ಕಿಂತ ಅಧಿಕ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯಗಳಲ್ಲಿ ಆರೋಪಿಗಳ ಭೌತಿಕ ಗುಣಲಕ್ಷಣಗಳನ್ನು ಸಂಗ್ರಹಿಸಲಾಗುತ್ತದೆ.
ರಂಜಿತ್‌ಕುಮಾರ್ ಬಂಡಾರು,ಎಸ್‌ಪಿ,ಚಿತ್ರದುರ್ಗ
---