ಪೊಲೀಸರ ವಶಕ್ಕೆ 
ಜಿಲ್ಲೆ

ಆರೋಪಿ ಸಮೇತ ಕಳವಾಗಿದ್ದ ಸರ ಪತ್ತೆ

ಚಿತ್ರದುರ್ಗ: ಜಿಲ್ಲೆಯ ಆರ್.ನುಲೇನೂರು ಗ್ರಾಮದಲ್ಲಿ ಮಹಿಳೆಯೊಬ್ಬರ 50 ಗ್ರಾಂ ತೂಕದ, 3 ಲಕ್ಷ ರೂ. ಮೌಲ್ಯದ ಬಂಗಾರದ ಸರ ಕಳವು ಮಾಡಿದ್ದ ಆರೋಪಿ ಸಮೇತ ಸರ ಪತ್ತೆ ಹಚ್ಚುವಲ್ಲಿ ಹೊಳಲ್ಕೆರೆ ವೃತ್ತದ ಪೊಲೀಸರು ಸಫಲರಾಗಿದ್ದಾರೆ. ತುಮಕೂರು ಜಿಲ್ಲೆಯ ಮದ್ದಾಕನಹಳ್ಳಿಯ ಸುರೇಶ ಬಂಧಿತ ಆರೋಪಿ.

ಆರ್.ನುಲೇನೂರು ಗ್ರಾಮದ ಸಾಕಮ್ಮ ಎಂಬುವವರು ತಮ್ಮ ಅಡಕೆ ತೋಟದಲ್ಲಿ ಸೆ. 3ರಂದು ಸುತ್ತಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಹೆದರಿಸಿ, ಅವರ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 8ರಂದು ಬಂಧಿಸಿದ್ದು, 4 ದಿನದೊಳಗೆ ಪತ್ತೆ ಹಚ್ಚಿ ಸರ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.