ಜಿಲ್ಲೆ

ಆರೋಪಿ ಬಂಧನ, 2.05 ಕೆಜಿ ಗಾಂಜಾ ವಶ

ಬಳ್ಳಾರಿ : ಇಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಅಂಜಿನಪ್ಪ ನಗರ ನಿವಾಸಿ ಅಯಾಬು ಖಾನ ಬಂಧಿತ. ಆರೋಪಿಯಿಂದ ಎರಡು ಲಕ್ಷ ರೂ. ಮೌಲ್ಯದ 2.05 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.