ಸರಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೆಂಕಟಮ್ಮ, ಶಿವಜನ್ಯ, ಚಲುವಕೃಷ್ಣ, ಶ್ರೀನಿವಾಸ್, ಮಹೇಶ್, ಮರಿಸ್ವಾಮಿ, ಮಲಾರ ಗಣೇಶ, ನವೀನ್ ಇದ್ದರು.  
ಜಿಲ್ಲೆ

ಆರೋಗ್ಯವಂತ ಸಮಾಜಕ್ಕೆ ಗುಣಮಟ್ಟ ಆಹಾರ ಸೇವನೆ ಅಗತ್ಯ

ಸರಗೂರು: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ದಿಮೆ ಅತ್ಯಗತ್ಯವಾಗಿದ್ದು, ಇದರಲ್ಲಿಯೂ ಯಶಸ್ಸು ಗಳಿಸಬಹುದು ಎಂದು ಉದ್ಯಮಿ ಮಿಲ್ ನಾಗರಾಜು ಹೇಳಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಪಿಲಾ ಕಲಾವಿದರ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಪರ್ಕ ಸಭೆ ಹಾಗೂ ಸ್ವಯಂ ಉದ್ಯೋಗ ಮತ್ತು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿಗಳಾಗಬೇಕು ಎಂದರೆ ಯಾವ ದಾರಿಯಲ್ಲಿ ಹೋದರೆ ಯಶಸ್ಸು ಗಳಿಸಬಹುದು. ಸಮಾಜಕ್ಕೆ ಅವಶ್ಯಕವಾಗಿ ಬೇಕಾದ ಉದ್ಯಮ ಮಾಡಬೇಕು ಎಂಬ ಆಲೋಚನೆಯಿಂದ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಸಿರಿಧಾನ್ಯ ಬಳಕೆಯಿಂದ ಆರೋಗ್ಯವನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳಬಹುದು. ನಾವು ತಿನ್ನುವ ಆಹಾರ ವಿಷವಾಗಿದ್ದು, ಆರೋಗ್ಯವಂತ ಸಮಾಜಕ್ಕೆ ಗುಣಮಟ್ಟದ ಆಹಾರ ಸೇವನೆ ಅಗತ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಿಬೇಕು. ಜೀವನದಲ್ಲಿ ಗುರಿ ಸಾಧಿಸುವ ಮೂಲಕ ಎಲ್ಲರಿಗೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಉಪಪ್ರಾಂಶುಪಾಲೆ ವೆಂಕಟಮ್ಮ, ಕಪಿಲಾ ಕಲಾವಿದರ ಸಂಘದ ಅಧ್ಯಕ್ಷ ಶಿವಜನ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಲುವಕೃಷ್ಣ, ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಮರಿಸ್ವಾಮಿ, ಖಚಾಂಚಿ ಮಲಾರ ಗಣೇಶ, ಸಂಘಟನಾ ಕಾರ್ಯದರ್ಶಿಗಳಾದ ನವೀನ್, ದೇವರಾಜು, ಉಪನ್ಯಾಸಕಿ ದೀಪಾ ಹಾಜರಿದ್ದರು.