ಔರಾದ್ ತಾಲೂಕಿನ ಲಾಧಾ ಗ್ರಾಪಂನಲ್ಲಿ ದೀಪಾಲಯ ಸಮಾಜ ಸೇವಾ ಸಂಸ್ಥೆ ಹಾಗೂ ಮರಿಯ ಕೃಪಾ ಆಸ್ಪತ್ರೆ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಪಿಡಿಒ ರಘುನಾಥ ರೆಡ್ಡಿ ಚಾಲನೆ ನೀಡಿದರು. ಗ್ರಾಪಂ ಸದಸ್ಯ ಪ್ರದೀಪ ಮಿಠಾರೆ , ಸಿಸ್ಟರ್ ಲೀನೆಟ್, ಸಿಸ್ಟರ್ ರೀಮಾ, ಸಿಸ್ಟರ್ ಸೆಕುಂದಾ ಇತರರಿದ್ದರು. 
ಜಿಲ್ಲೆ

ಆರೋಗ್ಯದ ಜಾಗ್ರತೆ ವಹಿಸಿ

ಔರಾದ್: ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯ ಚೆನ್ನಾಗಿದ್ದರೆ ನಮ್ಮ ಕಾರ್ಯಗಳು ಸರಿಯಾಗಿತ್ತವೆ ಎಂದು ಲಾಧಾ ಗ್ರಾಪಂ ಪಿಡಿಒ ರಘುನಾಥ ರೆಡ್ಡಿ ಹೇಳಿದರು.

ಲಾಧಾ ಗ್ರಾಪಂನಲ್ಲಿ ದೀಪಾಲಯ ಸಮಾಜ ಸೇವಾ ಸಂಸ್ಥೆ ಹಾಗೂ ಮರಿಯ ಕೃಪಾ ಆಸ್ಪತ್ರೆ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿದ ಅವರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ಜಾಗ್ರತೆ ವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ದೀಪಾಲಯ ಸಮಾಜ ಸೇವಾ ಸಂಸ್ಥೆ ಮತ್ತು ಮರಿಯ ಕೃಪಾ ಆಸ್ಪತ್ರೆಯ ಸದಸ್ಯರು ಸಮಾಜೋz್ದÁರಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ದೀಪಾಲಯ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಲೀನೆಟ್ ಮಾತನಾಡಿ, ಮೂಲ ಸೌಲಭ್ಯ ವಂಚಿತರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಸಂಸ್ಥೆಗಳಿAದ ಆರೋಗ್ಯ ಸೇವೆ ನೀಡುವಂತಹ ಕಾರ್ಯದಲ್ಲಿ ತೊಡಗಿz್ದೆÃವೆ. ಎಲ್ಲರೂ ಈ ಉಚಿತ ಶಿಬಿರಗಳಲ್ಲಿ ಭಾಗವಹಿಸಿ, ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆದು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಜಾಗೃತರಾಗಿರಬೇಕು ಎಂದರು.
ಗ್ರಾಪA ಸದಸ್ಯ ಪ್ರದೀಪ ಮಿಠಾರೆ, ಮರಿಯ ಕೃಪಾ ಆಸ್ಪತ್ರೆ ಮುಖ್ಯಸ್ಥೆ ಸಿಸ್ಡರ್ ರೀಮಾ, ಸಿಸ್ಟರ್ ಸೆಕುಂದಾ ಇತರರಿದ್ದರು.