ಜಿಲ್ಲೆ

ಆರೋಗ್ಯಕ್ಕೆ ಕ್ರೀಡೆ ಅಮೂಲ್ಯ ಸಾಧನ

ಕಮಲನಗರ: ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಸಕ್ತಿಯಿರುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಹಸೀಲ್ದಾರ್ ರಮೇಶ ಪೆದ್ದೆ ಹೇಳಿದರು.

ಪಟ್ಟಣದ ಸಕರ್ಾರಿ ಉದರ್ು ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ 2022-23ನೇ ಸಾಲಿನ ಕಮಲನಗರ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ಶರೀರದಲ್ಲಿ ಸದೃಢ ಮನಸ್ಸಿರುತ್ತದೆ ಎನ್ನುವಂತೆ ಮಕ್ಕಳ ಸವರ್ಾಂಗೀಣ ವಿಕಾಸದಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ ಮುಖ್ಯವಾಗಿವೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ ಮಾತನಾಡಿ, ಆಧುನಿಕತೆ ಬೆಳೆದಂತೆ ಕ್ರೀಡೆಗಳು ಮರೆಯಾಗುತ್ತಿವೆ. ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೀಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ದೈಹಿಕ ಚಟುವಟಿಕೆ ಕಡಿಮೆ ಆಗಿರುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ರೋಗ ನಿವಾರಣೆಗೆ ಕ್ರೀಡೆ ಒಳ್ಳೆಯ ಮದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಸೈಯದ್ ಫಜಲ್, ದೈಹಿಕ ಶಿಕ್ಷಣಾಧಿಕಾರಿ ಶಿವಾಜಿ ಬೆಂಜಲವಾಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ಬಿರಾದಾರ, ಗ್ರಾಪಂ ಪಿಡಿಒ ರಾಜಕುಮಾರ ತಂಬಾಕೆ, ಎಸ್ಡಿಎಂಸಿ ಅಧ್ಯಕ್ಷ ಸಂತೋಷ ತೋರಣೇಕರ್, ಸಲಾವುದ್ದೀನ್ ದಾವುದ್ಸಾಬ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪಂಢರಿ ಆಡೆ, ಅಧ್ಯಕ್ಷ ಬಸವರಾಜ ಪಾಟೀಲ್, ಬಿಆರ್ಪಿ ಶಶಿಕುಮಾರ ಬಿಡವೆ, ಸಿಆರ್ಸಿ ರಮಾಕಾಂತ ಕಾಳೆ, ಮುಖ್ಯಗುರು ವೀರಭದ್ರಪ್ಪ ಸಜ್ಜನಶೆಟ್ಟಿ, ರವಿ ಕಾರಬಾರಿ, ಸಂಜೀವ ನಿಟ್ಟೂರೆ, ಪರ್ತಕರ್ತರ ಸಂಘದ ತಾಲೂಕು ಅಧ್ಯಕ್ಷ ಮನೋಜ ಹಿರೇಮಠ ಇತರರಿದ್ದರು.

ಮುಖ್ಯ ಗುರು ಫಯೂಮ್ ಸ್ವಾಗತಿಸಿದರು. ಉಮಾಕಾಂತ ಮಹಾಜನ ನಿರೂಪಣೆ ಮಾಡಿದರು. ಕ್ರೀಡಾಕೂಟದಲ್ಲಿ 20 ತಂಡಗಳು ಪಾಲ್ಗೊಂಡಿದ್ದವು.