ಈಜು ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ, ಕಾಹೆರ್ ಕುಲಸಚಿವ ವಿ.ಎ.ಕೋಠಿವಾಲೆ, ಉಮೇಶ ಕಲಘಟಗಿ, ಇಂದ್ರಜಿತ ಹಲಗೇಕರ್, ಸುಧೀರ ಕುಸಾನೆ ಇತರರು ಇದ್ದರು. 
ಜಿಲ್ಲೆ

ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಪೂರಕ

ಬೆಳಗಾವಿ: ಸದೃಢ ಶರೀರದ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಂಡು, ರೋಗರಹಿತ ಜೀವನ ನಡೆಸುವಲ್ಲಿ ಕ್ರೀಡೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎಂ.ಬಿ.ಬೋರಲಿಂಗಯ್ಯ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿಯ ಈಜುಕೋಳದಲ್ಲಿ ಕೆಎಲ್‌ಇ ಸಂಸ್ಥೆಯ ಡೀಮ್ಡ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಮೇ.15 ರಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಸಬ್ ಜೂನಿಯರ್ ಮತ್ತು ಚಾಂಪಿಯನ್‌ಶಿಪ್‌ನ ಸ್ಪರ್ಧೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಿಸುವುದು ಮುಖ್ಯ. ಚಿಕ್ಕಂದಿನಿಂದಲೇ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ವಯಸ್ಸಿನ ಹಂಗಿಲ್ಲದೆ ಎಲ್ಲರೂ ಸದಾ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು ಎಂದರು. ವಿವಿಧ ವಿಭಾಗಗಲ್ಲಿ ವಿಜೇತ ಈಜುಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕಾಹೆರ್ ಕುಲಸಚಿವ ವಿ.ಎ.ಕೋಠಿವಾಲೆ, ಕಾರ್ಯಕ್ರಮ ಸಂಯೋಜಕ ಉಮೇಶ ಕಲಘಟಗಿ, ಇಂದ್ರಜಿತ ಹಲಗೇಕರ್, ಸುಧೀರ ಕುಸಾನೆ ಇತರರು ಇದ್ದರು.

ವಿಜೇತರ ವಿವರ: ಮೊದಲ ಗುಂಪಿನ 100 ಮೀಟರ್ ಬ್ರಿಸ್ಟ್ ಸ್ಟ್ರೋಕ್‌ನ ಬಾಲಕರ ಸ್ಪರ್ಧೆಯಲ್ಲಿ ಬೆಂಗಳೂರಿನ ವಿಧಿತ್ ಎಸ್.ಶಂಕರ್ ಪ್ರಥಮ, ಶುಭಾಂಗ್ ಕುಬೇರ ದ್ವಿತೀಯ ಹಾಗೂ ಆದಿತ ಒಲೆಟಿ ಅವರು ತೃತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಗ್ಲೋಬಲ್ ಸ್ವಿಮ್ ಸೆಂಟರ್‌ನ ಸಾನ್ವಿ ಎಸ್.ರಾವ್ ಪ್ರಥಮ, ಬಸವನಗುಡಿ ಅಕ್ವಾಟಿಕ್ ಸೆಂಟರ್‌ನ ಎಸ್.ಲಕ್ಷಾೃ ದ್ವಿತೀಯ ಹಾಗೂ ಗ್ಲೋಬಲ್ ಸ್ವಿಮ್ ಸೆಂಟರ್‌ನ ಲಿನೇಶಾ ಅನಿಲಕುಮಾರ ತೃತೀಯ ಸ್ಥಾನ ಪಡೆದುಕೊಂಡರು.

ಮೂರನೇ ಗುಂಪಿನ 200 ಮೀಟರ್ ಪ್ರೀ ಸ್ಟೈಲ್ ವಿಭಾಗದ ಬಾಲಕರ ಸ್ಪರ್ಧೆಯಲ್ಲಿ ಶರಣ ಶ್ರೀಧರ ಪ್ರಥಮ, ಜಸ್ ಸಿಂಗ್ ದ್ವಿತೀಯ ಹಾಗೂ ಆರವ್ ಜೆ., ಅವರು ತೃತೀಯ ಸ್ಥಾನ ಮುಡಿಗೇರಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಅಲಿಸ್ಸಾ ರೆಗೊ ಪ್ರಥಮ, ತ್ರಿಶಾ ಸಿಂಧು ದ್ವಿತೀಯ ಹಾಗೂ ತನ್ವಿ ಗೌರವ ತೃತೀಯ ಸ್ಥಾನ ಪಡೆದರು ಎಂದು ಆಯೋಜಕರು ತಿಳಿಸಿದ್ದಾರೆ.