ಸುರಪುರ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬೊರಲ್ಲಿ ಅನೇಕ ರೋಗ, ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು ಎಂದು ವಿಜಯಪುರನ ಡಾ.ನಿರ್ಮಾಲಾ ಕನ್ನಾಳ ಹೇಳಿದರು.
ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಶುಕ್ರವಾರ ದಿ.ರಾಣಿ ಪಾಪಮ್ಮ ಜೇಜಾ ತುಮಕೂರ ಜಹಾಗೀರದಾರ ಅವರ 20ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಮಹರ್ಷಿ ವಾಲ್ಮೀಕಿ, ಆರ್‌ಸಿ ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್ ಹಮ್ಮಿಕೊಂಡ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಆಯುರ್ವೇದಿಕ ಔಷಧ ವಿತರಣೆ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇವುಗಳಿಂದ ದೂರ ಇರಲು ಆರೋಗ್ಯಕರ ಜೀವನ ವಿಧಾನ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
50 ವರ್ಷಗಳಿಂದ ಇಷ್ಟೊಂದು ರೋಗ, ರುಜಿನಗಳು ಇರಲಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಕಾರಣ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು. ಶರೀರದಲ್ಲಿ ವಾತಾ, ಪಿತ್ತ, ಕಫಾ ಮತ್ತು ಸಪ್ತಧಾತು ಸಾಮಾನ್ಯವಾಗಿರಬೇಕು. ಮೂತ್ರ, ನಿದ್ರೆ ಸರಿಯಾಗಿರಬೇಕು. ಶಾರೀರಿಕ, ಮಾನಸಿಕ, ದೈಹಿಕವಾಗಿ ಚೆನ್ನಾಗಿರುವ ವ್ಯಕ್ತಿ ಆರೋಗ್ಯವಂತ ಎನ್ನಿಸಿಕೊಳ್ಳುತ್ತಾನೆ. ಹೀಗಾಗಿ ಪ್ರತಿಯೊಬ್ಬರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಆನಂದ ಹೇರೂರ ಮಾತನಾಡಿ, ಮುಂಬರುವ ದಿನಗಳಲ್ಲಿ ಪಾರಂಪರಿಕ ವೈದ್ಯರಿಗೆ ಕೇಂದ್ರ ಸರ್ಕಾರ 3ರಿಂದ 6 ತಿಂಗಳ ತರಬೇತಿ ನೀಡಿ ಪ್ರಮಾಣಪತ್ರ ನೀಡುವ ಯೋಜನೆ ಇದೆ ಎಂಬುದು ಆಯುಷ್ ಇಲಾಖೆಯಿಂದ ಮಾಹಿತಿ ಬಂದಿದೆ. ಪಾರಂಪರಿಕ ವೈದ್ಯರು ಪರಿಷತ್‌ನಲ್ಲಿ ನೋಂದಣಿಯಾಗಿರಬೇಕು ಹಾಗೂ ಸಂಪರ್ಕದಲ್ಲಿರಬೇಕು ಮತ್ತು ಚಟುವಟಿಕೆಯಲ್ಲಿ ಭಾಗವಹಿಸಿದವರಿಗೆ ಮಾತ್ರ ಇದು ಲಭಿಸುತ್ತದೆ ಎಂದರು.
ಶಾಸಕರ ಸಹೋದರ ರಾಜಾ ಸಂತೋಷ ನಾಯಕ ಉದ್ಘಾಟಿಸಿದರು. ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಇಲಕಲ್‌ನ ಶ್ರೀ ಬಸವಪ್ರಸಾದ ಸ್ವಾಮೀಜಿ, ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಅರಸು ಮನೆತನದ ಡಾ.ರಾಜಾ ಕೃಷ್ಣಪ್ಪ ನಾಯಕ, ಟ್ರಸ್ಟ್ನ ಗೌರವಾಧ್ಯಕ್ಷ ರಾಜಾ ಸುಭಾಶಚಂದ್ರ ನಾಯಕ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ರಾಜಾ ಚನ್ನಪ್ಪ ನಾಯಕ, ಟಿಎಚ್‌ಒ ಡಾ.ಆರ್‌ವಿಎನ್, ಗುರುಗುಂಟ ಸಂಸ್ಥಾನದ ರಾಜಾ ಸೋಮನಾಥ ನಾಯಕ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ, ವೇಣುಮಾಧವ ನಾಯಕ, ಹುಲಗಪ್ಪ ಪೂಜಾರಿ, ನರಸಿಂಹ ವೈದ್ಯ, ಮುಕ್ತಮ್ ಪಟೇಲ್ ವಜ್ಜಲ್ ಇತರರಿದ್ದರು. ಪ್ರಿಯಾಂಕಾ ವಿಶ್ವಕರ್ಮ ಪ್ರಾರ್ಥಿಸಿದರು. ಶಿವಕುಮಾರ ಮಸ್ಕಿ ಸ್ವಾಗತಿಸಿದರು. ಶೇಖ್ ಅಮ್ಜದ್ ಹುಸೇನ್ ವಂದಿಸಿದರು. ರಾಘವೇಂದ್ರ ಸುಗಂದಿ ಗೋಗಿ ನಿರೂಪಿಸಿದರು.