ಜಿಲ್ಲೆ

ಆರೋಗ್ಯಕರ ವೃದ್ಧಿಗಾಗಿ ಯೋಗ ವಿಚಾರ ಸಂಕಿರಣ

ಮೈಸೂರು: ರೋಟರಿ ಮೈಸೂರು, ಎಆರ್‌ಡಿಎಸ್‌ಐ, ಶ್ರೀವೇದವ್ಯಾಸ ಯೋಗ ಫೌಂಡೇಶನ್, ಇಂಡಿಕಾ ಯೋಗ ಉತ್ಸವ ಮತ್ತು ಮೈಸೂರು ಯೋಗ ಒಕ್ಕೂಟದಿಂದ ನಗರದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗಾಗಿ ಆರೋಗ್ಯಕರ ವೃದ್ಧಿಗಾಗಿ ಯೋಗ ಎಂಬ ಉಚಿತ ವಿಚಾರ ಸಂಕಿರಣ ಆಯೋಜಿಸಿಲಾಗಿತ್ತು.
ಅಪೋಲೋ ಬಿಜಿಎಸ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸೋಮನಾಥ್ ವಾಸುದೇವ್ ಮಾತನಾಡಿ, ಆರೋಗ್ಯವಂತ ವೃದ್ಧಾಪ್ಯ ಮತ್ತು ಬುದ್ಧಿಮಾಂದ್ಯತೆಯ ವೈದ್ಯಕೀಯ ಅಂಶಗಳನ್ನು ತಿಳಿಸಿದರು.
ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಭಾ ಪಿರೇರಾ ಇದ್ದರು. ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿ ಆಶೀರ್ವಚನ ಮತ್ತು ದೀಕ್ಷೆ ನೀಡಿದರು.
ಎಆರ್‌ಡಿಎಸ್‌ಐ ಡಾ.ಹನುಮಂತಾಚಾರ್ ಜೋಶಿ, ರೋಟರಿ ಮೈಸೂರಿನ ಅರುಣ್ ಬೆಳವಾಡಿ ಅವರು 13 ವರ್ಷಗಳ ಅನಾರೋಗ್ಯದ ಪಾಲಕರನ್ನು ನೋಡಿಕೊಂಡ ವೈಯಕ್ತಿಕ ಅನುಭವ ಹಂಚಿಕೊಂಡರು.
ಯೋಗ ಗುರು ಡಿ.ಶ್ರೀಹರಿ ಭಾವನಾ ಯೋಗ ಕುರಿತು ವಿವರಿಸಿದರು. ಹಿರಿಯ ವೈದ್ಯ ಡಾ.ಎ.ಎಸ್.ಚಂದ್ರಶೇಖರ್, ಹಿರಿಯ ನಾಗರಿಕರಿಗೆ ಯೋಗಾಭ್ಯಾಸ ಕುರಿತು ಸಲಹೆಗಳನ್ನು ನೀಡಿದರು. ಯೋಗ ಗುರು ರಾಘವೇಂದ್ರ ಪೈ, ಜ್ಞಾಪಕಶಕ್ತಿಯನ್ನು ಸುಧಾರಿಸಲು ಯೋಗ ಮುದ್ರೆಗಳನ್ನು ಪ್ರದರ್ಶಿಸಿದರು. ಗೌತಮ್ ಸಾಲೇಚಾ ಧನ್ಯವಾದ ಪ್ರಸ್ತಾಪಿಸಿದರು. ಶಿಬಿರಲ್ಲಿ ಭಾಗವಹಿಸಿದವರಿಗೆ ಆಯುಷ್‌ನಿಂದ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.