ಜಿಲ್ಲೆ

ಆರೋಗ್ಯಕರ ಬದುಕಿಗೆ ಯೋಗ ಸಹಕಾರಿ

ಅಥಣಿ: ನಿತ್ಯ ಕಲುಷಿತ ಆಹಾರ, ನೀರು, ಗಾಳಿ ಸೇವನೆಯಿಂದ ರೋಗಮಯ ಬದುಕು ನಡೆಸುತ್ತಿದ್ದೇವೆ. ಆರೋಗ್ಯಪೂರ್ಣ ಬದುಕಿಗೆ ಯೋಗ ಸಹಕಾರಿ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಯೋಗ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಆರ್.ಎಂ.ಡಾಂಗೆ ರಾಯಲ್ ನರ್ಸಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಅಥಣಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದ್ದು, ಅಥಣಿಯಲ್ಲಿ ಯೋಗ ಶಿಕ್ಷಕರ ತರಬೇತಿ ನಡೆಸುತ್ತಿರುವುದು ಸಂತಸದ ವಿಚಾರ. ನಿತ್ಯ ಯೋಗ ಮಾಡುತ್ತ ಸದೃಢ ಪ್ರಜೆಗಳಾಗಿ ಸಶಕ್ತ ಭಾರತ ನಿರ್ಮಿಸೋಣ. ಒಂದು ದಿನಕ್ಕೆ ಯೋಗ ಸಿಮಿತವಲ್ಲ ಎಂದರು.

ರಾಜ್ಯ ಯೋಗ ಪ್ರಭಾರಿ ಯೋಗಾಚಾರ್ಯ ಭವರಲಾಲ ಆರ್ಯ ಮಾತನಾಡಿ, ನಿರೋಗಿಯಾಗಿ ಇರಲು ಯೋಗ ಉತ್ತಮ ಎಂದರು. ನಂತರ ಯೋಗ ಪ್ರಾತ್ಯಕ್ಷಿಕೆ ಬಿಡುಗಡೆ ಮಾಡಿದರು.

ಮುಖಂಡರಾದ ಶಿವಾನಂದ ಮಾಲಗಾವಿ, ಎ.ಬಿ.ಪಾಟೀಲ, ಆರ.ಎಂ.ಡಾಂಗೆ, ಸುರೇಶ ಚಿಕ್ಕಟ್ಟಿ, ಕಿರಣ ಮನೊಳ್ಕರ, ಸಂಜಯ ಕುಸ್ತಿಗಾರ, ಸಂಭಾಜಿ ನಿಂಬಾಳ್ಕರ, ಬಾಲಕೃಷ್ಣ ಕೊಳೆಕರ, ವಿನಾಯಕ ಚಿಂಚೊಳಿಮಠ, ಎಸ್.ಕೆ.ಹೊಳೆಪ್ಪನವರ, ಆರ್.ಡಿ.ಧರಿಗೌಡ, ದೇವೆಂದ್ರ ಬಿಸ್ವಾಗರ, ಬಳವಂತ ಪತ್ತಾರ, ಶ್ರೀಶೈಲ ಪಾಟೀಲ, ಅಪ್ಪಾಸಾಬ ತಾಂಬಟ ಇತರರಿದ್ದರು.