ಜಿಲ್ಲೆ

ಆರೋಗ್ಯ ಹಕ್ಕು ಕಾಯ್ದೆ ಜಾರಿ ಆಗಲಿ

ರಮೇಶ ಮೇಳಕುಂದಾ

ಕಲಬುರಗಿ: ರಾಜ್ಯದಲ್ಲಿ ಸರ್ಕಾರ ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ತರಬೇಕು ಎಂದು ಕರ್ನಾಟಕ ಡ್ರಗ್ ಆ್ಯಕ್ಷನ್ ಫೋರಂ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನದ ಪ್ರಮುಖ ಡಾ.ಗೋಪಾಲ ದಾಬಡೆ ಒತ್ತಾಯಿಸಿದರು.

ರಾಜ್ಯದ ಜನರಿಗೆ ಆರೋಗ್ಯ ಹಕ್ಕಿನ ಜಾಗೃತಿ ಮೂಡಿಸಲು ಬೀದರ್‌ನಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ ನಡೆಸಲಾಗುತ್ತದೆ. ಕೆಎಸ್‌ಎಂಎಸ್‌ಸಿಎಲ್‌ನ್ನು ಜನಪರ ಸಂಸ್ಥೆ ಮಾಡಲು ಮತ್ತು ಕೆಲಸದಲ್ಲಿ ಪಾರದರ್ಶಕತೆ ತರಲು ಮುಂದಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲೇ ಸಾರ್ವಜನಿಕರಿಗೆ ಔಷಧ ಸಿಗುವಂತೆ ಆಗಬೇಕು. ಬಾಣಂತಿಯರ ಸಾವಿಗೆ ಕಳಪೆ ಔಷಧ ಪೂರೈಕೆಯೇ ಕಾರಣ. ಜವಾಬ್ದಾರಿ ಹೊಂದಿದ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ವೈದ್ಯಕೀಯ ಸೇವಾ ನಿಗಮ ಪರೀಕ್ಷಿಸದೇ ಔಷಧ ನೇರವಾಗಿ ಸರಬರಾಜು ಮಾಡಿರುವುದರಿಂದ ಬಾಣಂತಿಯರ ಸಾವು ಸಂಭವಿಸುತ್ತಿವೆ. ರಕ್ತನಾಳದಲ್ಲಿ ನೀಡುವ ಔಷಧ ಪಶ್ಚಿಮ ಬಂಗಾಳದ ಕಂಪನಿ ಬಳ್ಳಾರಿ ಜಿ¯್ಲÁಸ್ಪತ್ರೆಗೆ ಸರಬರಾಜು ಮಾಡಿದೆ. ಔಷಧ ಗುಣಮಟ್ಟದ್ದು ಅಲ್ಲ ಎಂಬುದು ಗೊತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.

ರಾಜಸ್ಥಾನದ ಆರೋಗ್ಯ ಹಕ್ಕು ಕಾಯ್ದೆ ಮಾದರಿ ರಾಜ್ಯದಲ್ಲೂ ಕಾಯ್ದೆ ಜಾರಿ ಮಾಡಬೇಕಿದೆ. ಸರ್ಕಾರಿ ಜಿ¯್ಲÁಸ್ಪತ್ರೆಗಳಲ್ಲಿ ಔಷಧ ಹೊರಗೆ ಬರೆದು ಕೊಡಬಾರದು. ಆಸ್ಪತ್ರೆಗಳ ಸುತ್ತ ಖಾಸಗಿ ಮೆಡಿಕಲ್ ಇರದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗೋಪಾಲಕುಮಾರ, ಮಹೇಶ ಪಾಟೀಲ್, ಭೀಮರಾಯ, ದಿಲ್‌ಶಾದ್, ರೇಷ್ಮಾ, ಮಸ್ತಾನ್ ಬಿರಾದಾರ ಇತರರಿದ್ದರು.