ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ವಾಹನಕ್ಕೆ ನಿರಂಜನಕುಮಾರ್ ಚಾಲನೆ ನೀಡಿದರು. ಡಾ.ಗಿರಿದಾಸ್, ಡಾ.ವೆಂಕಟಸ್ವಾಮಿ, ಕೆ.ಆರ್. ಲೋಕೇಶ್, ಸಿ.ಮಹದೇವಪ್ರಸಾದ್, ರೇವಣ್ಣ, ಇದ್ದರು. 
ಜಿಲ್ಲೆ

ಆರೋಗ್ಯ ಸೇವೆ ದೊರಕಿಸಲು ಕ್ರಮ

ಗುಂಡ್ಲುಪೇಟೆ:

ತಾಲೂಕಿನ ಎಲ್ಲ ಜನರಿಗೂ ಉತ್ತಮ ಆರೋಗ್ಯ ಸೇವೆ ದೊರಕಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆಂಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಕಾಲದಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲು ಈಗಾಗಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೂ ಶಾಸಕರ ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ಸುಸಜ್ಜಿತ ಆಂಬುಲೆನ್ಸ್ ನೀಡಿದ್ದರಿಂದ ತುರ್ತುಚಿಕಿತ್ಸೆ ಅಗತ್ಯವಿದ್ದ ರೋಗಿಗಳಿಗೆ ವರದಾನವಾಗಿದೆ. ಗ್ರಾಮಾಂತರ ಪ್ರದೇಶಗಳ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕುವಂತಾಗಲು ಹೋಬಳಿ ಕೇಂದ್ರವಾದ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂವರು ವೈದ್ಯರನ್ನು ನಿಯೋಜಿಸಿ ಅದನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಗಿರಿದಾಸ್, ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟಸ್ವಾಮಿ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್. ಲೋಕೇಶ್, ತಾಪಂ ಮಾಜಿ ಸದಸ್ಯರಾದ ಸಿ. ಮಹದೇವಪ್ರಸಾದ್, ರೇವಣ್ಣ, ಮಹೇಶ್, ವೃಷಭೇಂದ್ರಪ್ಪ, ನಾಗರಾಜು ಇತರರು ಇದ್ದರು.