ಜಿಲ್ಲೆ

ಆರೋಗ್ಯ ಸಚಿವರಿಂದ ಮೃತರ ನೊಂದ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ವಿತರಣೆ

ಚಿತ್ರದುರ್ಗ:ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವ ಐವರು ನೊಂದ ಕುಟುಂಬಗಳಿಗೆ ಆ ರೋಗ್ಯಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ತಲಾ 10 ಲಕ್ಷ ರೂ.ಗಳ ಚೆಕ್‌ನ್ನು ವಿತರಿಸಿದರು.
ಶನಿವಾರ ಕವಾಡಿಗರಹಟ್ಟಿಗೆ ಭೇಟಿ ನೀಡಿ ನೊಂದ ಕುಟುಂಬಗಳಿಗೆ ಸ್ವಾಂತನ ಹೇಳಿದ ಆರೋಗ್ಯ ಸಚಿವರು ಬಳಿಕ ಸುದ್ದಿಗಾರರ ಜತೆ ಮಾತನಾಡಿ,ದುರ್ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖಾ ವರದಿ ಕೈ ಸೇರಿದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು. ಉಸ್ತುವಾರಿ ಸಚಿವರು ಕೂಡ ಈ ಕುರಿತು ಆದೇಶಿಸಿದ್ದಾರೆ. ಈಗಾಗಲೇ ಮೂವರು ನಗರಸಭೆ ಇಂಜಿನಿಯರ್,ಸಿಬ್ಬಂದಿಯನ್ನು ಅಮಾನತುಗೊಳಿಸ ಲಾಗಿದೆ.
ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜತೆ ಚರ್ಚಿಸುತ್ತೇನೆ. ಚಿಕಿತ್ಸೆ ವಿಳಂಬವಾಗಿ ಮೃತಪಟ್ಟಿದ್ದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಪ್ರಕರಣದ ಎಲ್ಲ ವರದಿಗಳು ಬಹಿರಂಗ ಆಗಲಿವೆ. ರಾಜ್ಯದಲ್ಲೇ ಎಲ್ಲೆ ಇಂಥ ಪ್ರಕರಣಗಳು ಮರುಕಳಿಸಬಾರದು.
ಜಿಲ್ಲಾಸ್ಪತ್ರೆಯಿಂದ ಹೊರಗಿಂದ ಔಷಧ ತರಲು ಚೀಟಿ ಬರೆದು ಕೊಡುತ್ತಿದ್ದಾರೆ ಎಂಬುದರ ಕುರಿತು ಪರಿಶೀಲಿಸುತ್ತೇನೆ ಎಂದರು. ಆಶಾ ಕಾರ‌್ಯಕರ್ತೆಯರು,ಅಧಿಕಾರಿಗಳು ಮಾಹಿತಿ ಪಡೆದ ಜನರ ಜನರ ಅಹವಾಲು ಆಲಿಸಿದರು. ಸಮಾಜಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ,ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ,ಟಿ.ರಘುಮೂರ್ತಿ,ಮಾಜಿ ಶಾಸಕ ಉಮಾಪತಿ,ಡಿಸಿ ಜಿಆರ್‌ಜೆ ದಿವ್ಯಾಪ್ರಭು ಮತ್ತಿತರ ಹಿರಿಯ ಅಧಿಕಾರಿಗಳು,ಜನಪ್ರತಿನಿಧಿಗಳು,ಕಾಂಗ್ರೆಸ್ ಮುಖಂಡರು ಇದ್ದರು.