ವಿಜಯಪುರ: ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಕಾಲೇಜ್ ಆ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಡಿ್ಯಾಕ್ಟೊ ರೊಬೊಟಿಕ್ಸ್ ಮತ್ತು ಆಟೊಮೇಷನ್ ಲಿಮಿಟೆಡ್ ಕಂಪನಿ ಹಮ್ಮಿಕೊಂಡಿದ್ದ ಕ್ಯಾಪಸ್ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ ಕೋರ್ಸ್ಗಳ ಆರು ವಿದ್ಯಾರ್ಥಿಗಳು ವಾರ್ಷಿಕ ಐದು ಲಕ್ಷ ರೂ. ಪ್ಯಾಕೇಜ್ದೊಂದಿಗೆ ಆಯ್ಕೆಯಾಗಿದ್ದಾರೆ.
ಜೂ. 5 ರಂದು ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಆಯ್ಕೆಯಾದ ವಿದ್ಯಾರ್ಥಿಗಳಾದ ದೀಪಕ್ ನಾಯಕ್, ಗಂಗಾಧರ ಕನ್ನೋಳ್ಳಿ, ಅಶೋಕ ಹೂಗಾರ, ಮುದಸಿ ಸಚಿನ, ಬಸವರಾಜ ಗಂಗನಗೌಡರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಆದಿಲ್ ಖಾನ್ ಆಯ್ಕೆ ಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ನಿರ್ದೇಶಕ ಡಾ. ವಿ.ಜಿ. ಸಂಗಮ, ಬಿಎಲ್ಡಿಇ ಸಂಸ್ಥೆ ಅಧ್ಯ ಡಾ. ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನಿಲ್ಗೌಡ ಬಿ.ಪಾಟೀಲ, ನಿರ್ದೇಶಕ ರಾಹುಲ್ ಪಾಟೀಲ, ಉಪ ಪ್ರಾಚಾರ್ಯ ಡಾ. ಲೀನಾ ರಾಘಾ, ಡಾ.ಪಿ.ವಿ. ಮಾಳಜಿ, ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರೊ. ಪ್ರಶಾಂತ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.