ಕಲಬುರಗಿ: ಗ್ಯಾರಂಟಿಯಾಗಿ ಹೇಳುತ್ತೇನೆ, ರಾಜ್ಯದಲ್ಲಿ ' ಆರು ಬಿಜೆಪಿ ಉಳಿಯಲ್ಲ. ಇದು ಪಕ್ಕಾ ಗ್ಯಾರಂಟಿ ಕೊಡುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಸೋಮವಾರ ಜನಸ್ನೇಹಿ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಪತ್ರಕರ್ತರ ಜತೆ ಮಾತನಾಡಿ, ಕರ್ನಾಟಕದಲ್ಲಿ ಅವರದ್ದು(ಬಿಜೆಪಿ) ಇನ್ಮುಂದೆ ಏನೂ ನಡೆದಿಲ್ಲ. ಮುಂದೆಯೂ ನಡೆಯಲ್ಲ. ಇನ್ನು ಆರು ತಿಂಗಳಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ' ಎಂದರು.
ಎಷ್ಟು ಜನ ಸಂಪರ್ಕದಲ್ಲಿ ಇದ್ದಾರೆ ಪ್ರಶ್ನೆಗೆ, 'ನನಗೆ ಗೊತ್ತಿಲ್ಲ. ಬಿಜೆಪಿಯವರನ್ನು ಕೇಳಿ. ಎಷ್ಟು ಜನ ಅಸಮಾಧಾನ ಇದ್ದಾರೆ ಎಂಬುದನ್ನು ಅವರನ್ನು ಕೇಳಿ' ಎಂದು ಪ್ರಿಯಾಂಕ್ ಮಾರುತ್ತರ ನೀಡಿದರು.
'ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರುವುದಿಲ್ಲವೇ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವೂ 140 ವರ್ಷಗಳಿಂದ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದೇವೆ' ಎಂದು ಹೇಳಿದರು.