ಕೊಡೇಕಲ್: ನಾರಾಯಣಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಶ್ರೀ ಗುರುರಾಜ ಭಜನಾ ಮಂಡಳಿ ತಿಳಿಸಿದೆ. ಮೂರು ದಿನಗಳವರೆಗೆ ನಡೆಯುವ ಈ ಮಹೋತ್ಸವ, ಗುರುವಾರ ಪುರ್ವಾರಾಧನೆ, ಸೆ.೧ರಂದು ಮಧ್ಯಾರಾಧನೆ ಮತ್ತು ಶನಿವಾರ ಉತ್ತರಾರಾಧನೆಯೊಂದಿಗೆ ಸಮಾರೋಪಗೊಳ್ಳಲಿದೆ. ಮೂರು ದಿನಗಳ ಕಾಲ ಶ್ರೀಮಠದಲ್ಲಿ ಸುಪ್ರಭಾತ, ಅಷ್ಟೋತ್ತರ, ಅಭಿಷೇಕ, ಹಸ್ತೋದಕ, ಪ್ರಸಾದ ಮತ್ತು ಪಂಡಿತರಿAದ ಪ್ರವಚನ, ಭಜನೆ ಸೇರಿ ವಿವಿಧ ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿವೆ.