ಚಿಕ್ಕಮಗಳೂರು ತಾಲೂಕಿನ ಆರದವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಮೇಘನಾ, ಸ್ವಪ್ನ ಚಂದ್ರಶೇಖರ್, ಯಶ್ವಂತ್ ರಾಜ್ ಅರಸ್ ಮತ್ತಿತರರಿದ್ದರು. 
ಜಿಲ್ಲೆ

ಆರದವಳ್ಳಿ ಗ್ರಾಮದಲ್ಲಿ ಪ್ರತಿಭಾ ಕಾರಂಜಿ ಸಂಭ್ರಮ

ಚಿಕ್ಕಮಗಳೂರು: ತಾಲೂಕಿನ ಆರದವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷೆ ಮೇಘನಾ ಉದ್ಘಾಟಿಸಿದರು.

ಮಕ್ಕಳಿಗೆ ವಿವಿಧ ಸ್ಫರ್ಧೆಗಳಲ್ಲಿ ಆಯೋಜಿಸುವ ಮೂಲಕ ಶಾಲಾಭಿವೃದ್ದಿ ಸಮಿತಿ, ಡಿಎಸ್‌ಎಸ್ ಹಾಗೂ ಗ್ರಾಪಂನಿAದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಹರಿಹರದಹಳ್ಳಿ ಗ್ರಾಪಂ ಅಧ್ಯಕ್ಷೆ ಸ್ವಪ್ನ ಚಂದ್ರಶೇಖರ್, ಉಪಾಧ್ಯಕ್ಷ ಯಶ್ವಂತ್ ರಾಜ್ ಅರಸ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಮಹಿಳಾ ಸಂಚಾಲಕಿ ಅರುಣಾಕ್ಷಿ, ತಾಲೂಕು ಸಂಘಟನಾ ಸಂಚಾಲಕಿ ಶಿಲ್ಪಾ ರಮೇಶ್, ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಸಮೂಹ ಸಂಪನ್ಮೂಲ ಇಲಾಖೆ ಅಧಿಕಾರಿ ಉಮೇಶ್ ಮತ್ತಿತರರು ಹಾಜರಿದ್ದರು.